ಜನ ಬಲಕ್ಕೆ ಜಯ: ನಾಗರಾಜ್
ಕ.ಪ್ರ.ವಾರ್ತೆ, ಬೀರೂರು, ಮೇ 1
ಈ ಬಾರಿ ಮತದಾರ ಪ್ರಭುಗಳು ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತರವರನ್ನು ಗೆಲ್ಲಿಸುವ ಮೂಲಕ ಜನಬಲದ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ ಎಂದು ಜೆಡಿಎಸ್ ಜಿಪಂ ಸದಸ್ಯ ಬಿ.ಪಿ. ನಾಗರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧನಬಲದ ಮೂಲಕ ಜಯಶಾಲಿಯಾದ ಹಿಂದಿನ ಬಿಜೆಪಿ ಶಾಸಕರು ಕ್ಷೇತ್ರವನ್ನು ದತ್ತು ತೆಗೆದುಕೊಂಡು ಸರ್ಕಾರ ಮಾಡಿದ ಕೆಲಸ ಏನೆಂಬುದು ಇಡೀ ಕ್ಷೇತ್ರದ ಜನರಿಗೆ ತಿಳಿದಿದೆ. ಈ ಭಾರಿ ಪ್ರೀತಿ ರಾಜಕಾರಣಕ್ಕೆ ಜಯವಾಗುವ ಮೂಲಕ ಜೆಡಿಎಸ್ಗೆ ಕ್ಷೇತ್ರ ದೊರಕಲಿದೆ ಎಂದರು.
ಕಡೂರು ಹಾಗೂ ಬೀರೂರು ಅವಳಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಯ ಭದ್ರಾ ಯೋಜನೆ ಹಾಗೂ ಆಶ್ರಯ ನಿವೇಶನ ಹಂಚಿಕೆಗೆ ಮೊದಲ ಆದ್ಯತೆ ಸಿಗಲಿದೆ. ನೆನೆಗುದಿಗೆ ಬಿದ್ದಿರುವ ಮಹತ್ವದ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ದತ್ತಾರವರಿಂದ ಮಾತ್ರ ಸಾಧ್ಯ ಎಂದರು.
ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಶಿವರತನ್ ಸಂಚೇತಿ ಮಾತನಾಡಿ, ಜಾತಿ ರಾಜಕಾರಣ ಮಾಡದೆ ಪ್ರೀತಿ ರಾಜಕಾರಣ ಮಾಡುವ ದತ್ತರವರ ಆಯ್ಕೆ ಕ್ಷೇತ್ರದ ಪ್ರಭುದ್ದ ಮತದಾರರ ಜವಬ್ದಾರಿಯಾಗಿದೆ ಎಂದರು. ಗೋಷ್ಠಿಯಲ್ಲಿ ಬೀರೂರು ನಗರ ಘಟಕದ ಅಧ್ಯಕ್ಷ ಉಮಾಶಂಕರ್, ಹರಿಪ್ರಸಾದ್, ಅಬೀದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

