ಚಿಕ್ಕಮಗಳೂರು

ಮತದಾನ ಮಾಡಿ, ಕಳಂಕ ಕಳಚಬನ್ನಿ

Published On :

ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಸೋಮಾರಿ ಮತದಾರರನ್ನು ಹೊಂದಿದ ಕ್ಷೇತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಅದಕ್ಕೆ ಕಾರಣ, ಇತ್ತೀಚಿನ ವರ್ಷಗಳಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿರುವುದು.
2008ರ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡುವ ಹಕ್ಕು ಹೊಂದಿದವರ ಸಂಖ್ಯೆ 1,93,754. ಆದರೆ, ಮತದಾನವಾಗಿದ್ದು 1,09,927 ಮಾತ್ರ. ಅಂದರೆ ಶೇ.56.74 ಮತದಾರರು ಮಾತ್ರ ಮತ ಚಲಾಯಿಸಿದರು. ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಹಿಂದಿನ ಅಂಕಿಸಂಖ್ಯೆಯನ್ನು ಗಮನಿಸಿದರೆ ಉತ್ತಮ ಮತದಾನವಾಗಿದ್ದು ಉದಾಹರಣೆ ಕಡಿಮೆಯೇ. ಈ ಬಾರಿಯಾದರೂ ಶೇ.75ರಿಂದ 80ರಷ್ಟು ಮತದಾನದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿಯೇ ಚುನಾವಣಾ ಆಯೋಗ ವಿವಿಧ ರೀತಿಯ ಪ್ರಚಾರದ ಮೂಲಕ ಜಾಗೃತಿ ಮೂಡಿಸುವ ಅಭಿಯಾನ ನಡೆಸಿತು. ಬೀದಿ ನಾಟಕ, ವಾಕಥಾನ್, ಹೋರ್ಡಿಂಗ್, ಸಹಿ ಸಂಗ್ರಹ, ಸ್ಪರ್ಧೆಗಳು, ಎಸ್‌ಎಂಎಸ್, ಯೋಗ, ಪಂಜಿನ ಮೆರವಣಿಗೆ ಹೀಗೆ ಬಗೆಬಗೆಯ ಮಾಧ್ಯಮದ ಮೂಲಕ ಪ್ರಚಾರ ನಡೆಸಿತು. ವಿವಿಧ ಸಂಘಟನೆಗಳೂ ಸಹ ಮತದಾನ ಪ್ರಮಾಣ ಹೆಚ್ಚಾಗಿಸುವ ನಿಟ್ಟಿನಲ್ಲಿ ಪ್ರಚಾರ ನಡೆಸಿವೆ.
ಆಶೀರ್ವಾದ್ ಸಂಸ್ಥೆ: ಆಶೀರ್ವಾದ್ ಸಂಸ್ಥೆ ಪದಾಧಿಕಾರಿಗಳು ನಗರದ ವಿವಿಧ ಬಡಾವಣೆಯಲ್ಲಿ ಮತದಾನ ಕುರಿತು ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಿದರು. ಮತದಾನ ಎಲ್ಲರ ಹಕ್ಕು. ಪ್ರತಿಯೊಬ್ಬರು ಉತ್ತಮ ಹಾಗೂ ಸಮಾಜವನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸಬಲ್ಲ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಎಂದು ನಗರದ ಗಲ್ಲಿ ಗಲ್ಲಿಗಳಲ್ಲಿ ತಿರುಗಿ ಮತದಾನದ ಅರಿವು ಮೂಡಿಸಿದರು.
ಮಾರಿಕೊಳ್ಳಬೇಡಿ: ತಮ್ಮ ಅಮೂಲ್ಯವಾದ ಮತಕ್ಕೆ 500 ರುಪಾಯಿಯಿಂದ ಸಾವಿರ ರುಪಾಯಿವರೆಗೆ ಕೊಡಬಹುದು ಅಷ್ಟೇ. 5 ವರ್ಷಕ್ಕೆ ಈ ಹಣ ಸಾಕೇ, ಒಳ್ಳೆ ಕೆಲಸ ಆಗ ಬೇಡವೇ. ಹಾಗಾದರೆ, ಈ ರೀತಿ ಪಡೆದಂತಹ ಹಣವನ್ನು ಪ್ರತಿ ದಿನ ಲೆಕ್ಕ ಹಾಕಿದರೆ, ಕೇವಲ 50 ಪೈಸೆ ಸಿಗುತ್ತದೆ. ಈ ರೀತಿಯ ದಿನದ 50 ಪೈಸೆಗೆ ಐದು ವರ್ಷ ನಮ್ಮನ್ನು ನಾವು ಮಾರಿಕೊಳ್ಳಬೇಕೆ ಎಂದು ಸಾರ್ವಜನಿಕರನ್ನು ಜಾಗೃತಗೊಳಿಸಿದರು.
ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆಗಾರಿಕೆ ನಮ್ಮ, ನಿಮ್ಮೆಲ್ಲರ ಮೇಲಿದೆ. ಆದರಿಂದ ಕಡ್ಡಾಯವಾಗಿ ನಾವು ನೀವು ಹಾಗೂ ನಮ್ಮ ಸುತ್ತ ಮುತ್ತಲಿನವರೆಲ್ಲರೂ ಸೇರಿ ಮತದಾನ ಮಾಡಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ. ಎಲ್ಲರೂ ಮತದಾನವನ್ನು ಕಡ್ಡಾಯವಾಗಿ ಚಲಾಯಿಸೋಣ. ಹಕ್ಕು ಏನೆಂದು ತೋರಿಸೋಣವೆಂಬ ಕರ ಪತ್ರವನ್ನು ಹಂಚುವ ಮೂಲಕ ಸಂಸ್ಥೆ ಪದಾಧಿಕಾರಿಗಳು ಮತದಾರರನ್ನು ಜಾಗೃತಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.