ಚಿಕ್ಕಮಗಳೂರು

ಹಾವು ಕಡಿದು ಮಹಿಳೆ ಸಾವು

Published On :

ನರಸಿಂಹರಾಜಪುರ: ಹಾವು ಕಡಿದು ವಿಠಲ ಗ್ರಾಮದ ಸಲೋಮಿ (47) ಎಂಬ ಮಹಿಳೆಯು ಮೃತ ಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.
ಸಲೋಮಿ ಅವರು ತಮ್ಮ ಮನೆಯ ಗೇರು ತೋಟದಲ್ಲಿ ಶನಿವಾರ ಸಂಜೆ ಗೇರು ಬೀಜ ಕೊಯ್ಯುತ್ತಿರುವಾಗ ಹಾವು ಕಚ್ಚಿದೆ. ತಕ್ಷಣ ಅವರನ್ನು ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತರಿಗೆ ಪತಿ, ಇಬ್ಬರು ಮಕ್ಕಳಿದ್ದಾರೆ.
ಭದ್ರಾವತಿಯಲ್ಲಿ ಶೇ. 59 ಮತದಾನ

ಭದ್ರಾವತಿ:  ಭಾನುವಾರ ಭದ್ರಾವತಿ ವಿಧಾನಸಭಾ ಕ್ಷೇತ್ರ 112ಕ್ಕೆ ಸಂಬಂಧಿಸಿದ 238 ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ನೆರವೇರಿತು.
 ಮತಗಟ್ಟೆಗಳು ಬೆಳಗ್ಗೆ 7ರಿಂದಲೇ ತೆರೆದಿದ್ದರೂ ಮತದಾನ ಚುರುಕಿನಿಂದ ನಡೆದಿದ್ದು ಬೆಳಗ್ಗೆ 10ರ ನಂತರವೇ. ನಗರ ಪ್ರದೇಶದಲ್ಲಿ ಬೆಳಗ್ಗೆ ಮತದಾನ ಪ್ರಕ್ರಿಯೆ ಸ್ವಲ್ಪ ನೀರಸವಾಗಿತ್ತು. ಮಧ್ಯಾಹ್ನದ ನಂತರ ಸ್ವಲ್ಪ ಚೇತರಿಸಿಕೊಂಡು ಮತದಾನ ಸಂಜೆ 4 ಗಂಟೆ ನಂತರ 6 ಗಂಟೆವರೆಗೆ ಶೇಕಡ 56 ರಷ್ಟು ಆಗಿತ್ತು. ಗ್ರಾಮಾಂತರ ಪ್ರದೇಶದಲ್ಲಿ ಮತದಾರರು ಲವಲವಿಕೆಯಿಂದ ಮತದಾನದಲ್ಲಿ ಭಾಗವಹಿಸಿದ್ದು ಶೇಕಡ 59ರಷ್ಟು ಮತದಾನವಾಗಿದ್ದು ಕಂಡುಬಂದಿತು.
ಶತಾಯುಷಿಗಳ ಮತದಾನ: ಮತಗಟ್ಟೆ ಸಂಖ್ಯೆ 106ರಲ್ಲಿ ಎ.ಕೆ.ಕಾಲೋನಿ ವಾಸಿ 120 ವರ್ಷದ ಹಳದಮ್ಮ ತಮ್ಮ ಕುಟುಂಬದ ಸದಸ್ಯರ ಸಹಾಯದೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರು.
  110 ವರ್ಷದ ಲಕ್ಷ್ಮಮ್ಮ ಕನಕ ಮಂಟಪದ ಎದುರಿಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹುರುಪಿನಿಂದ ಮತದಾನ ಮಾಡಿದರು. ಶ್ರೀರಾಮನಗರದಲ್ಲಿ ದೀಪಕ್ ಎಂಬ ಅಂಗವಿಕಲ ಯುವಕ ತಂದೆಯ ನೆರವಿನಿಂದ ಮತಗಟ್ಟೆಗೆ ಬಂದು ಮತದಾನ ಮಾಡಿದರು. ದೀಪಕ್ ಇದೇ ಪ್ರಥಮ ಬಾರಿಗೆ ಮತದಾನ ಮಾಡುತ್ತಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.