ಶಾಸಕ ಎಂಪಿಕೆ ಮತ ಚಲಾವಣೆ
ಕ.ಪ್ರ.ವಾರ್ತೆ, ಮೂಡಿಗೆರೆ, ಮೇ 5
ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆಯಿತು. ಹೆಂಗಸರು 56507, ಗಂಡಸರು 53284 ಒಟ್ಟು 109791 ಮತ ಚಲಾವಣೆಯಾಗಿದ್ದು. ಶೇ 72 ಮತದಾನವಾಗಿದೆ.
ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಕರ್ನಾಟಕ ಅರಣ್ಯ ಮತ್ತು ವಿಹಾಧಾಮದ ಅಧ್ಯಕ್ಷ ಎಂ.ಕೆ. ಪ್ರಾಣೇಶ್, ಕೆಪಿಸಿಸಿ ಸದಸ್ಯ ಜಿ.ಎಚ್. ಹಾಲಪ್ಪಗೌಡ, ಅಭ್ಯರ್ಥಿಗಳಾದ ಕಾಂಗ್ರೆಸ್ನ ಬಿ.ಎನ್. ಚಂದ್ರಪ್ಪ. ಜೆಡಿಎಸ್ನ ಬಿ.ಬಿ. ನಿಂಗಯ್ಯ, ಸಿಪಿಐನ ಸಾತಿಸುಂದರೇಶ್, ಬಿಎಸ್ಪಿ ಯ ಮಂಜಯ್ಯ, ಸಿಪಿಐ(ಎಂಎಲ್)ಕುಮಾರ್, ಪಕ್ಷೇತರ ಅಭ್ಯರ್ಥಿಗಳಾದ ನಂಜುಂಡ, ಬಿ.ಎಂ. ರಮೇಶ್, ತಮ್ಮ ಹಕ್ಕನ್ನು ಚಲಾಯಿಸಿದರು.
ತಾಲೂಕಿನ ಅಲೇಖಾನ್ ಹೊರಟ್ಟಿಯಲ್ಲಿ 173 ಮತದಾರರಿದ್ದು. ಅಭಿವೃದ್ದಿ ಕಾಮಗಾರಿ ಆಗದ ಕಾರಣ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದ ಹಿನ್ನೆಲೆಯಲ್ಲಿ. ಮತಗಟ್ಟಗೆ ಮತದಾರರು ಆಗಮಿಸಿರಲಿಲ್ಲ.
ಸಂಧಾನ ಯಶಸ್ವಿ: ನಂತರ ಜಿಲ್ಲಾಧಿಕಾರಿಗಳು ಮತದಾರರ ಮನ ಒಲೈಸುವಲ್ಲಿ. ಯಶಸ್ವಿಯಾಗಿದ್ದರ ಹಿನ್ನಲೆಯಲ್ಲಿ ಮಧ್ಯಾಹ್ನ 1 ಗಂಟೆಯ ನಂತರ ಮತದಾನ ಪ್ರಾರಂಭ ವಾಗಿದ್ದು. 108 ಮತದಾರರು ಮತ ಚಲಾಯಿಸಿದ್ದು ಶೇ 62 ರಷ್ಟು ಮತದಾನವಾಯಿತು.
ಶಾಂತಿಯುತವಾಗಿ ಮತದಾನ ಮಾಡಲು ಸಹಕರಿಸಿದ ಮತದಾರರಿಗೂ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಕೆ, ಕಂದಾಯ ಇಲಾಕೆ ಸೇರಿದಂತೆ ವಿವಿಧ ಇಲಾಕೆಯ ಅಧಿಕಾರಿಗಳಿಗೆ ಕಂದಾಯ ಉಪವಿಭಾಗಾಧಿಕಾರಿ ಡಾ.ಪ್ರಶಾಂತ್ ಮತ್ತು ಉಪಚುನಾವಣಾಧಿಕಾರಿ ರುದ್ರಾಪ್ಪಾಜಿರಾವ್ ಅಭಿನಂದನೆಗಳನ್ನು ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

