ಚಿಕ್ಕಮಗಳೂರು

ಯೋಜನೆಗಳು ಜನರಿಗೆ ತಲುಪಲಿ

Published On :

ಕ.ಪ್ರ.ವಾರ್ತೆ, ಮೂಡಿಗೆರೆ,  ಮೇ 15
ಸಮಾಜಮುಖಿ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಕಟ್ಟಕಡೆಯ ಜನರಿಗೂ ತಲುಪುವಂತಾಗಬೇಕು ಎಂದು ಹಿರೇಬೈಲಿನ  ನಾಗರಿಕಾ ಸೇವಾ ಸಮಿತಿ ಸದಸ್ಯ ಕಿರಣ್ ಶೆಟ್ಟಿ ತಿಳಿಸಿದರು.
ಕಳಸ ಸಮೀಪದ ಹಿರೇಬೈಲಿನಲ್ಲಿ ಬುಧವಾರ ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟ, ಬಿ.ಎಲ್. ಸಂದೀಪ್, ವೆರೋನಿಕಾ ಟೀಚರ್ ಹಾಗೂ ಸಾರ್ವಜನಿಕರ ದೇಣಿಗೆಯಿಂದ ಹಿರೇಬೈಲು ನಾಗರಿಕ ಸೇವಾ ಸಮಿತಿಯಿಂದ ಆ್ಯಂಬುಲೆನ್ಸ್ ಕೊಡುಗೆಯಾಗಿ ನೀಡಿ ಮಾತನಾಡಿದರು.
ಕುಗ್ರಾಮ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಾಹನದ ಕೊರತೆಯಿಂದ ರೋಗಿಗಳು ಪರದಾಡುವುದು ಸಾಮಾನ್ಯ. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿರುವ ಘಟನೆಗಳು ಹಲವಾರು. ಇವುಗಳನ್ನು ಗಮನದಲ್ಲಿಟ್ಟುಕೊಂಡ ನಾಗರಿಕ ಸೇವಾ ಸಮಿತಿ ಈ ಸೇವೆ ನೀಡುತ್ತಿದ್ದು, ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಹಿರೆಬೈಲು ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಆನಂದ ಮೂರ್ತಿ ಆ್ಯಂಬುಲೆನ್ಸ್‌ಗೆ ಚಾಲನೆ ನೀಡಿದರು. ಜಗದೀಶ್ ಬಂಡಾರಿ, ಜಯಂತ್, ಸದಾಶಿವ, ಸುರೇಶ್ ಬಂಡಾರಿ, ಗೋವರ್ದನ್, ಚಂದ್ರಶೇಖರ, ನಳರಾಜ್, ರಾಮೇಗೌಡ, ಬಿ.ಎಲ್. ಸಂದೀಪ್, ಅಂತೋನಿ, ಅಗಸ್ಟೀನ್ ಇದ್ದರು.

ಸರ್ಕಾರಿ ಜೂನಿಯರ್ ಕಾಲೇಜಿಗೆ ಉತ್ತಮ ಫಲಿತಾಂಶ
ಶೃಂಗೇರಿ: ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಉತ್ತಮ ಸಾಧನೆ ಮಾಡಿದೆ.
ಒಟ್ಟು 250 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 221 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೂವರು ಅತ್ಯುನ್ನತ ಶ್ರೇಣಿ, 114 ಉನ್ನತ ಶ್ರೇಣಿ, 82 ದ್ವಿತಿಯ ಶ್ರೇಣಿ, 22 ತೃತಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗಕ್ಕೆ ಶೇ.90, ವಾಣಿಜ್ಯ ವಿಭಾಗಕ್ಕೆ ಶೇ.29, ವಿಜ್ಞಾನ ವಿಭಾಗಕ್ಕೆ ಶೇ.85 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಶ್ವಿನಿ 533 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.