ಚಿಕ್ಕಮಗಳೂರು

ವೈಭವಯುತ ಶಂಕರ ಮಹಾರಥೋತ್ಸವ

Published On :

ಶೃಂಗೇರಿ: ಇಲ್ಲಿನ ಶ್ರೀ ಶಾರದಾ ಪೀಠದ ಸಂಸ್ಥಾಪಕ ಜಗದ್ಗುರು ಶಂಕರಭಗವತ್ಪಾದಾಚಾರ್ಯರ ಮಹಾರಥೋತ್ಸವ ಗುರುವಾರ ವೈಭವಯುತವಾಗಿ ಜರುಗಿತು.
 ಜಗದ್ಗುರು ಭಾರತೀ ತೀರ್ಥರ ಸಾನ್ನಿಧ್ಯದಲ್ಲಿ ನಡೆದ ಮಹಾರಥೋತ್ಸವದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಕಳೆದ 1 ವರ್ಷದಿಂದ ಶ್ರೀಗಳು ವಿಜಯಯಾತ್ರೆ ಕೈಗೊಂಡ ಹಿನ್ನೆಲೆಯಲ್ಲಿ ರಥೋತ್ಸವ ಶ್ರೀಗಳ ಅನುಪಸ್ಥಿತಿಯಲ್ಲಿ ನಡೆದಿತ್ತು. ಇದೀಗ ಶ್ರೀಗಳ ಉಪಸ್ಥಿಯಿಂದ ರಥೋತ್ಸವಕ್ಕೆ ಮೆರಗು ಬಂದಿದ್ದು ರಸ್ತೆಯ ಇಕ್ಕೆಲಗಳಲ್ಲಿ ಭಕ್ತಾದಿಗಳು ಶ್ರೀಗಳ ದರ್ಶನ ಪಡೆದು, ಶಂಕರ ಭಗವತ್ಪಾದಾಚಾರ್ಯರನ್ನು ನಮಿಸುತ್ತಿದ್ದರು.
 ರಥ ಸಾಗುವ ಮುನ್ನಾ ಮುಖ್ಯ ರಸ್ತೆಯನ್ನು ಶುಭ್ರಗೊಳಿಸಿ ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆ ಆರಂಭವಾದ ಮಹಾರಥೋತ್ಸವಲ್ಲಿ ಛತ್ರಿ ಚಾಮರ, ಚಾಮರ, ವಾದ್ಯ ವೃಂದ, ಮಠದ ಆನೆಗಳಾದ ಶ್ರೀ ಲಕ್ಷ್ಮಿ, ಜಯಲಕ್ಷ್ಮಿ, ಮಠದ ಗೋವುಗಳು ಮೆರವಣಿಗೆಗೆ ವಿಶೆಷ ಮೆರಗು ನೀಡಿತ್ತು. ಶಂಕರ ಜಯಂತಿಯ ಪ್ರಯುಕ್ತ ಶ್ರೀ ಮಠದಲ್ಲಿ ಮೇ 10 ರಿಂದ 15 ರವರೆಗೆ ಶಂಕರ ಭಗವತ್ಪಾದಾಚಾರ್ಯರ ಮೂರ್ತಿಗೆ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಚತುರ್ವೇದ-ಪ್ರಸಾಥಾನ ತ್ರಯ ಭಾಷ್ಯ- ಶಂಕರ ದಿಗ್ವಿಜಯ ಮೊದಲಾದ ಪಾರಾಯಣಗಳು, ಮಹಾಮಂಗಳಾರತಿ ನೆರವೇರಿತು.
 ಜಗದ್ಗುರುಗಳ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ, ವೇದ ಸ್ವಸ್ಥಿವಾಚನ, ವಿದ್ವಾಂಸರಿಂದ ಉಪನ್ಯಾಸ, ಶಂಕರರಿಗೆ ಶ್ರೀಗಳಿಂದ ವಿಶೇಷ ಪೂಜೆ, ಮಹಾಮಂಗಳಾರತಿ, ಅನುಗ್ರಹ ಭಾಷಣ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.