ಅಪಘಾತ:ಛಾಯಾಗ್ರಾಹಕ ಸಾವು
ಮೂಡಿಗೆರೆ: ಪಾನಮತ್ತನಾದ ಮಗ ತಾಯಿಯನ್ನೇ ಕೊಂದು ನಂತರ ಆಕೆಯ ಶವವನ್ನು ಮನೆಯಲ್ಲಿಟ್ಟು ಮನೆಗೆ ಬೆಂಕಿ ಹಚ್ಚಿದ ದಾರುಣ ಘಟನೆ ತಾಲೂಕಿನ ಕಳಸ ಹೋಬಳಿಯ ತನೋಡಿ ಗ್ರಾಮದ ಕಾಳಿಪಲ್ ಎಂಬಲ್ಲಿ ನಡೆದಿದೆ.
ಮೃತಪಟ್ಟ ನತದೃಷ್ಟೆ ಕಾಳಿಪಲ್ನ ಸಣ್ಣಮ್ಮ(55) ತಾಯಿ ಸಾವಿಗೆ ಎರಡನೇ ಮಗ ಶೇಖರ(30)ಕಾರಣ ಎಂದು ಆರೋಪಿಸಲಾಗಿದೆ.
ಘಟನೆಯ ವಿವರ: ಬುಧವಾರದ ರಾತ್ರಿ ಕುಡಿದು ಮನೆಗೆ ಬಂದ ಶೇಖರ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಪ್ರಾರಂಬಿಸಿ, ನಂತರ ತಾಯಿಯನ್ನು ಕೊಂದು ಮನೆಗೆ ಬೆಂಕಿ ಹಚ್ಚಿದ್ದಾನೆ. ಮನೆ ಮತ್ತು ಆತನ ತಾಯಿಯ ಶವ ಸಂಪೂರ್ಣ ಸುಟ್ಟು ಹೋದ ಮೇಲೆ ತಡ ರಾತ್ರಿ ದೂರದ ಮನೆಯವರನ್ನು ಎಬ್ಬಿಸಿ ತನ್ನ ತಾಯಿ ಮನೆಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ. ಬೆಳಗ್ಗೆ ಸುಟ್ಟುಕರಕಲಾದ ಶವವನ್ನು ನೋಡಿ ತಕ್ಷಣ ಕಳಸ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆಂದು ತಿಳಿದುಬಂದಿದೆ. ಸ್ಥಳಕ್ಕೆ ಕುದುರೇಮುಖ ವೃತ್ತ ನಿರೀಕ್ಷಕ ನಾಯ್ಕರ್, ಕಳಸ ಠಾಣಾಧಿಕಾರಿ ರಾಮಚಂದ್ರ ನಾಯಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತ:ಛಾಯಾಗ್ರಾಹಕ ಸಾವು
ತರೀಕೆರೆ: ಸಮೀಪದ ಬೆಟ್ಟದಹಳ್ಳಿ ಬಳಿ ಗುರುವಾರ ಸಂಜೆ ಸಂಭವಿಸಿದ ಕಾರು ಅಪಘಾತದಲ್ಲಿ ಪಟ್ಟಣದ ಅಪೂರ್ವ ಸ್ಟುಡಿಯೋ ಮಾಲಿಕರು, ಛಾಯಾಗ್ರಾಹಕ ದೋರನಾಳು ವಿಜಯ್ (45) ಸಾವನ್ನಪ್ಪಿದ್ದಾರೆ.
ವಿಜಯ್ ಅವರು ಕರ್ತವ್ಯ ಮುಗಿಸಿಕೊಂಡು ಬೀರೂರಿನಿಂದ ಅವರ ಕಾರಿನಲ್ಲಿ ತರೀಕೆರೆಗೆ ವಾಪಾಸಾಗುತ್ತಿದ್ದಾಗ ಬೆಟ್ಟದಹಳ್ಳಿ ಬಳಿಯಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದ ವಿಜಯ್ ಅವರು ಸ್ಥಳದಲ್ಲಿಯೇ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ನೂತನ್ ಅವರಿಗೂ ಅಪಘಾತದಲ್ಲಿ ಗಾಯವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಆಪಾರ ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ಮೃತರ ಅಂತ್ಯದರ್ಶನ ಪಡೆದು ಸಂತಾಪ ಸೂಚಿಸಿದರು.
ಶಾಸಕ ಜಿ.ಎಚ್. ಶ್ರೀನಿವಾಸ್, ಕೆ.ಆರ್. ದೃವಕುಮಾರ್, ಡಿ.ಎಸ್. ಗಿರೀಶ್, ಎನ್. ಮಂಜುನಾಥ್, ಟಿ.ಎನ್. ವಿಶುಕಮಾರ್, ಎನ್. ರಾಜು, ರಮೇಶ್, ಪದ್ಮರಾಜ್ ಮೊದಲಾದವರು ಆಸ್ಪತ್ರೆಗೆ ಆಗಮಿಸಿ ಮೃತರ ಅಂತ್ಯದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದರು.
ಸಂತಾಪ: ಮಾಜಿ ಶಾಸಕ ಡಿ.ಎಸ್. ಸುರೇಶ್, ಎ.ವಿ. ನಾಗಭೂಷಣ್, ಎಚ್.ವಿ. ಸತ್ಯನಾರಾಯಣ್, ಆರ್. ದೇವಾನಂದ್, ವಿಜಯ್ ಅವರ ನಿಧನಕ್ಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

