ರಸ್ತೆ ಸರಿಪಡಿಸಲು ಒತ್ತಾಯ
ಕ.ಪ್ರ. ವಾರ್ತೆ, ಹಿರಿಯೂರು, ಮೇ 22
ಪಟ್ಟಣದ ಗಾಂಧಿ ಸರ್ಕಲ್ ಮಧ್ಯದಲ್ಲಿ ಆಳವಾದ ಗುಂಡಿಗಳು ಬಿದ್ದಿದ್ದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆಯೆಂದು ವಂದೇ ಮಾತರಂ ಸಂಘಟನೆ ಆರೋಪಿಸಿದೆ.
ರಸ್ತೆ ಅಗಲೀಕರಣ ಪ್ರಕ್ರಿಯೆ ಸಂದರ್ಭದಲ್ಲಿ ಪಟ್ಟಣದ ಪ್ರಧಾನ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸುವ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ನಡೆದು ರಸ್ತೆಯ ನಡುವಲ್ಲಿ ಗಂಡಿ ಗೊಟರುಗಳಿಗೆ ಮುಕ್ತಾಯ ಹಾಡಲಾಗುತ್ತದೆಯೆಂದು ಭಾವಿಸಲಾಗಿತ್ತು.
ಆದರೆ ದ್ವಿ ಪಥ ರಸ್ತೆಯ ನಂತರವೂ ರಸ್ತೆಯ ಪ್ರಮುಖ ತಿರುವು ಮತ್ತು ವೃತ್ತಗಳಲ್ಲಿ ಆಳವಾದ ಗುಂಡಿಗಳು ನಿರ್ಮಾಣಗೊಂಡು ಸಮಸ್ಯೆ ಉದ್ಬವಿಸಿದೆಯೆಂದು ವೇದಿಕೆಯ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಪುರಸಭೆ ನಿರ್ಲಕ್ಷ್ಯ: ಜನಸಂಖ್ಯೆ ಮತ್ತು ವಾಹನಗಳ ಸಾಂದ್ರತೆ ಹೆಚ್ಚಾದಂತೆ ಪಟ್ಟಣದಲ್ಲಿ ಸಂಚಾರ ನಿಯಮಗಳು ಸಂಪೂರ್ಣ ಉಲ್ಲಂಘನೆಯಾಗುತ್ತಾ ದಿನವೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿರುವ ನಡುವೆಯೆ ರಸ್ತೆ ನಿರ್ಮಾಣದ ಕಳಪೆ ಕಾಮಗಾರಿಗಳಿಂದಾಗಿ ಸಮಸ್ಯೆಗಳ ಗಾಯದ ಮೇಲೆ ಉಪ್ಪುಸುರಿದಂತಾಗಿದೆಯೆಂದು ಆರೋಪಿಸಿದ್ದಾರೆ.
ಈ ಎಲ್ಲ ರಾದ್ದಾಂತಗಳಿಗೆ ಈ ಹಿಂದಿನ ಪುರಸಭೆಯ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದ್ದು, ಎರಡು ತಿಂಗಳ ಹಿಂದೆ ನಡೆದ ಚುನಾವಣೆ ನಂತರ ಆರಿಸಿ ಬಂದ ಹೊಸ ಕೌನ್ಸಿಲ್ ಸಭೆ ಅಧಿಕೃತವಾಗಿ ಕಾರ್ಯಾರಂಭ ಮಾಡದಿರುವುದರಿಂದ ಅಧಿಕಾರಿಗಳು ಯಾವುದೇ ಸಾರ್ವಜನಿಕ ಸಮಸ್ಯೆಗಳಿಗೆ ಸೊಪ್ಪುಹಾಕುತ್ತಿಲ್ಲವೆಂದು ಸಂಘಟನೆಯ ಪದಾಧಿಕಾರಿಗಳು ಕಿಡಿಕಾರಿದ್ದಾರೆ.
ಅಧಿಕಾರಿಗಳು ಮತ್ತು ನೂತನ ಕೌನ್ಸಿಲರ್ಗಳು ಎಚ್ಚೆತ್ತುಕೊಂಡು ಕೂಡಲೇ ಸಮಸ್ಯೆಗೆ ನಿವಾರಣೆಗೆ ಮುಂದಾಗಿ ರಸ್ತೆಯ ಗುಂಡಿಗಳನ್ನು ಮುಚ್ಚಬೇಕು.
ಇಲ್ಲವಾದಲ್ಲಿ ಸಂಘಟನೆಯಿಂದ ಪುರಸಭೆ ಧೋರಣೆ ವಿರುದ್ಧ ಪ್ರತಿಭಟಿಸಿ ಪುರಸಭೆಯ ಮುತ್ತಿಗೆ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗುತ್ತದೆಯೆಂದು ವೇದಿಕೆಯ ಅಧ್ಯಕ್ಷ ಎಂ.ಎಲ್. ಗಿರಿಧರ್, ರಾಜ್ಯ ಕಾರ್ಯದರ್ಶಿ ವಿ. ಅರುಣ್ಕುಮಾರ್, ಉಪಾಧ್ಯಕ್ಷ ಕೃಷ್ಣಮೂರ್ತಿ ಇತರರು ಹೇಳಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

