ಆಧಾರ್‌ಗಾಗಿ ಭಾರಿ ಪರದಾಟ
ಸೊರಬ: ಆಧಾರ್ ಕಾರ್ಡ್‌ಗಾಗಿ ನಿಂತು ಆಧಾರ ಕಳೆದುಕೊಳ್ಳುವ ಮುನ್ನ ಪರ್ಯಾಯ ವ್ಯವಸ್ಥೆ ಆಗಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಜೆ.ಎಸ್. ಚಿದಾನಂದಗೌಡ ಆಗ್ರಹಿಸಿದ್ದಾರೆ.
ಪಟ್ಟಣದ ಪೋಸ್ಟ್ ಆಫೀಸ್ ಆಧಾರ್ ಕಾರ್ಡ್ ಮಾಡಿಸಲು ಇರುವ ಒಂದು ಆಧಾರ ಹಾಗಾಗಿ ನಾಮುಂದು ತಾಮುಂದು ಎಂದು ಬೆಳಿಗ್ಗೆಯಿಂದಲೂ ಸರದಿ ಹಚ್ಚುವ ಮಂದಿಗೆ ಆಧಾರ್ ಕಾರ್ಡ್ ಸಿಕ್ಕಿದರೆ ಸಿಕ್ತು ಇಲದಿದ್ರೆ ಇಲ್ಲ ಎನ್ನುವ ಪರಿಸ್ಥಿತಿ ಬಂದಿದೆ. ದಿನದಿಂದ ದಿನಕ್ಕೆ ಜನಸಂದಣಿ ಅಧಿಕವಾಗಿದೆ. ಹಾಗಾಗಿ ಇದನ್ನು ತಡೆಗಟ್ಟಲು ಪ್ರತಿ ಗ್ರಾಪಂ ಮಟ್ಟದಲ್ಲಿ ನೋಂದಣಿ ಕೇಂದ್ರ ತೆಗೆಯುವುದು ಸೂಕ್ತ ಎಂದಿದ್ದಾರೆ.
ನೋಂದಣಿಗೆ ಸರ್ಕಾರ ಯಾವಾಗ ಬೇಕಾದರೂ ಕಡೆಯ ದಿನಾಂಕ ಘೋಷಿಸಬಹುದು ಎಂದು ಭಾವಿಸಿರುವ ಜನ ಮುಗಿ ಬೀಳುತ್ತಿದ್ದಾರೆ. ಸಾಗರ ರಸ್ತೆಯ ಮುಖ್ಯ ಅಂಚೆ ಕಚೇರಿ ಸಮಯ ಬೆಳಿಗ್ಗೆ 9 ರಿಂದ ಸಂಜೆ 5 ರ ತನಕ, ಸಾರ್ವಜನಿಕರು ಬೆಳಿಗ್ಗೆ 6ರಿಂದಲೆ ಸರದಿ ಹಚ್ಚುತ್ತಿದ್ದು, 3 ವರ್ಷದ ಮಕ್ಕಳು ಬರುತ್ತಿದ್ದಾರೆ.
ತಾಲೂಕಿನಲ್ಲಿ 3 ವರ್ಷ ಮೇಲ್ಪಟ್ಟವರ ಸಂಖ್ಯೆ 5 ಲಕ್ಷಕ್ಕೂ ಹೆಚ್ಚಿದ್ದು, ಇವರೆಲ್ಲರಿಗೂ ನೋಂದಣಿ ಮಾಡಲು ಒಂದು ಅಂಚೆ ಕಚೇರಿಯಿಂದ ಸಾಧ್ಯವಿಲ್ಲ. ದಿನಕ್ಕೆ ಹೆಚ್ಚೆಂದರೆ 150 ಕುಟುಂಬಗಳಿಗೆ ಮಾತ್ರ ನೋಂದಣಿ ಮಾಡಿಸಲು ಸಾಧ್ಯ. ಹಾಗಾಗಿ ಕಾರ್ಯದೊತ್ತಡ ತಪ್ಪಿಸಲು ಎಲ್ಲರಿಗೂ ನೋಂದಣಿ ಮಾಡಿಸಲು ಅವಕಾಶವಾಗುವಂತೆ ತಾಲೂಕಿನ 39 ಗ್ರಾಪಂ ಹಾಗೂ ಗ್ರಾಮಾಂತರ ಪ್ರದೇಶದ ಅಂಚೆ ಕಚೇರಿಯಲ್ಲಿ ನೋಂದಣಿ ಮಾಡಿಸಲು ಅನುವು ಮಾಡಿಕೊಡಬೇಕು ಎಂದು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

