ನಾಳೆ ಉಚಿತ ಸಾಮೂಹಿಕ ವಿವಾಹ
ಶೃಂಗೇರಿ: ಶಾರದಾ ಪೀಠ, ವಿವಿಧ ಸಂಘಟನೆಗಳು ಹಾಗೂ ಭಾರತ್ ವಿದ್ಯಾ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಮೇ 29ರ ಬುಧವಾರ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದೆ. ಮಠದ ಆಡಳೀತಾಧಿಕಾರಿ ವಿ.ಆರ್. ಗೌರೀಶಂಕರ ಮಾಂಗಲ್ಯ ವಿತರಣೆ ಮಾಡಲಿದ್ದು. ಎ.ಎಸ್.ನಯನ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ತಹಸಿಲ್ದಾರ್ ದೇವಮ್ಮ, ಕೋವಾರೇವಣ್ಣ, ಟಿ.ಕೆ. ವಿಶ್ವಜಿತ್, ಬಿ. ಶಿವಶಂಕರ್, ಮಾವಿನಕಾಡು ರಂಗನಾಥ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಉದುಸೆಗೆ ಬಸ್ ಸೌಲಭ್ಯ
ಮೂಡಿಗೆರೆ: ಉದುಸೆ ಗ್ರಾಮದ ಜನರ ಹಲವು ವರ್ಷಗಳ ಬೇಡಿಕೆಯಾಗಿದ್ದ ಸರಕಾರಿ ಬಸ್ಸು ಸಂಚಾರಕ್ಕೆ ನೂತನ ಶಾಸಕ ಬಿ.ಬಿ.ನಿಂಗಯ್ಯ ಸೂಚನೆ ಮೇರೆಗೆ ಮೂಡಿಗೆರೆ ಘಟಕ ವ್ಯವಸ್ಥಾಪಕರು ಹಸಿರು ನಿಸಾನೆ ತೋರಿದ್ದಾರೆ.
ಮೂಡಿಗೆರೆ ಕೇಂದ್ರ ಬಸ್ಸು ನಿಲ್ದಾಣದಿಂದ ಬೆಳಿಗ್ಗೆ8ಮತ್ತು ಸಂಜೆ 4 ಗಂಟೆಗೆ ಹೊರಡುವ ಬಸ್ಸು ಉದುಸೆ ಗ್ರಾಮವನ್ನು ತಲುಪಿ ಮರಳಿ ಮೂಡಿಗೆರೆಗೆ ಹಿಂತಿರುಗಲಿದೆ. ಈವರೆಗೆ ಮೂರು ಕಿ.ಮಿ.ದೂರವನ್ನು ಕಾಲ್ನಡಿಗೆ ಮೂಲಕ ಕ್ರಮಿಸಿ ಮುಖ್ಯ ರಸ್ತೆ ತಲುಪಬೇಕಿದ್ದರಿಂದ ಶಾಲಾ ಕಾಲೇಜು ವಿದ್ಯಾಥಿಗಳು ಸೇರಿದಂತೆ ಜನಸಾಮಾನ್ಯರಿಗೆ ತೊಂದರೆ ಎದುರಾಗಿತ್ತು. ನೂತನ ಶಾಸಕರು ಸರಕಾರಿ ಬಸ್ಸು ಸೇವೆ ಕಲ್ಪಿಸಿದ್ದರಿಂದ ಗ್ರಾಮದ ಜನರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆಯ ಅಭಿವೃದ್ಧಿಗೆ ಸಚಿವರಿಗೆ ಮನವಿ
ಭದ್ರಾವತಿ: ಎಂ.ಪಿ.ಎಂ ಕಾಗದ ಮತ್ತು ಸಕ್ಕರೆ ಕಾರ್ಖಾನೆ ಉದ್ಯೋಗಿಗಳ ಸಂಘದ ಪದಾಧಿಕಾರಿಗಳು ಹಾಗೂ ಎಂ.ಪಿ.ಎಂ ಗುತ್ತಿಗೆ ಕಾರ್ಮಿಕರ ಸಂಘದ (ಎಚ್.ಪಿ.ಎಫ್) ಪದಾಧಿಕಾರಿಗಳು ಭಾನುವಾರ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಭೇಟಿಮಾಡಿ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಅಭಿವೃದ್ಧಿ ವಿಷಯ ಚರ್ಚಿಸಿ ಅದರ ಬಗ್ಗೆ ತುರ್ತು ತೀರ್ಮಾನ ತೆಗೆದುಕೊಳ್ಳಬೇಕೆಂದು ಮನವಿ ಮಾಡಿರುವುದಾಗಿ ಎಂಪಿಎಂ ಕಾಗದ ಮತ್ತು ಸಕ್ಕರೆ ಕಾರ್ಖಾನೆ ಉದ್ಯೋಗಿಗಳ ಸಂಘದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಮಿಕರಿಗೆ 2 ವರ್ಷದಿಂದ ತಡೆಹಿಡಿದಿರುವ ತುಟ್ಟಿಭತ್ಯೆ ಮತ್ತು 2013ರ ವಾರ್ಷಿಕ ಇಂಕ್ರಿಮೆಂಟ್ ಮತ್ತಿತರ ಸೌಲಭ್ಯಗಳನ್ನು ತಕ್ಷಣ ಬಿಡುಗಡೆ ಮಾಡಲು ಸರ್ಕಾರದ ಮೇಲೆ ಒತ್ತಡ ತರಲು ಸಹ ಮನವಿ ಮಾಡಲಾಯಿತೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈತರಿಗೆ ಚೆಕ್ ವಿತರಣೆ
ಕೊಪ್ಪ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತಾಲೂಕಿನ 21ಜನ ರೈತರಿಗೆ ರು. 4.93 ಲಕ್ಷ ವೆಚ್ಚಾದ ಮೇವು ಕಟಾವು ಯಂತ್ರಗಳನ್ನು ಸೋಮವಾರ ಶಾಸಕರ ಕಚೇರಿ ಆವರಣದಲ್ಲಿ ವಿತರಣೆ ಮಾಡಲಾಯಿತು.
7 ಕೈ ಚಾಲಿತ ಮೇವು ಕಟಾವು ಯಂತ್ರ ಸೇರಿಂದತೆ, 1 ಎಚ್‌ಪಿಯ 5 ಯಂತ್ರ, 2 ಎಚ್‌ಪಿಯ 5 ಯಂತ್ರ, 3 ಎಚ್‌ಪಿಯ 2 ಯಂತ್ರ, 6.5 ಎಚ್‌ಪಿ 2 ಮೇವು ಕಟಾವು ಯಂತ್ರಗಳನ್ನು ವಿತರಣೆ ಮಾಡಿದರು. ರಾಷ್ಟ್ರೀಯ ಭದ್ರತಾ ಕುಟುಂಬ ಯೋಜನೆಯಡಿ ತಲಾ 10 ಸಾವಿರದಂತೆ 12 ಜನರಿಗೆ ಒಟ್ಟು 1.20 ಲಕ್ಷದ ಚೆಕ್‌ಗಳನ್ನು ಶಾಸಕ ಡಿ.ಎನ್. ಜೀವರಾಜ್ ವಿತರಣೆ ಮಾಡಿದರು.
ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಸ್.ಎನ್. ರಾಮಸ್ವಾಮಿ, ತಾಪಂ ಉಪಾಧ್ಯಕ್ಷ ಬೆಳಗೊಳ ರಮೇಶ್, ಸದಸ್ಯ ಬಿ.ಆರ್. ನಾರಯಾಣ್ ಪ್ರೇಮಾ ದಾಮೋದರ್, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಲಕ್ಷ್ಮಿಕಾಂತ್, ಶೇಷಗಿರಿ, ಗ್ರಾಮ ಲೆಕ್ಕಾಧಿಕಾರಿ ಸತೀಶ್, ಪಶು ಇಲಾಖೆ ವೈದ್ಯರಾದ ವೀರಭದ್ರಪ್ಪ, ಸುಧೀರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

