ಚಿಕ್ಕಮಗಳೂರು

ರೈತರ ಮೊಗದಲ್ಲಿ ಸಂತಸ ತಂದ ಮಳೆ

Published On :

ಕ.ಪ್ರ.ವಾರ್ತೆ, ಕಡೂರು, ಮೇ 28 ಕಳೆದ ಆರೇಳು ವರ್ಷದಿಂದ ಬರಗಾಲದ ಬೇಗೆ ಅನುಭವಿಸುತ್ತಾ ಜನ ಜಾನುವಾರುಗಳಿಗೆ ಕುಡಿಯುವ ನೀರು ಸಿಗದ ಸ್ಥಿತಿ ಎದುರಿಸುತ್ತಿದ್ದ ಕಡೂರು ತಾಲೂಕಿನಲ್ಲಿ ಕಳೆದ 2 ದಿನಗಳಿಂದ ಮಾಯದಂತಹ ಮಳೆ ಬರುವುದರೊಂದಿಗೆ ರೈತರ ಮೊಗದಲ್ಲಿ ಹರ್ಷ ಮೂಡುವಂತಾಗಿದೆ.   
ಕಳೆದ ಒಂದು ವಾರದ ಹಿಂದೆ ಕೇವಲ ಗುಡುಗು ಮಿಂಚು ಬಂದು ಬಲವಾದ ಗಾಳಿ ಬೀಸುತ್ತಿದ್ದುದರಿಂದ ಬಂದ ಮಳೆ ಹಾಗೆಯೇ ಹೋಗಿ ನಿರಾಸೆಯಲ್ಲಿ ಮುಳುಗಿ ರೈತರ ಕೈಗಳಿಗೆ ಕೆಲಸವಿಲ್ಲದೆ ಗ್ರಾಮಾಂತರ ಪ್ರದೇಶದ ಹಳ್ಳಿಹಳ್ಳಿಗಳ ಕಟ್ಟೆಗಳಲ್ಲಿ ಟೈಂ ಪಾಸ್ ಮಾಡುತ್ತಿದ್ದರು.
2ದಿನದಿಂದ ಮಳೆ: ಇದೀಗ ಕಳೆದೆರಡು ದಿನಗಳಿಂದ ಗುಡುಗು ಸಿಡಿಲು, ಮತ್ತು ಮಿಂಚಿನಿಂದಲೂ ಕೂಡಿದ ಮಳೆ ಸುರಿಯುತ್ತಿರುವುದರಿಂದ ಕಂಗಾಲಾಗಿದ್ದ ಜನರ ಮುಖದಲ್ಲಿ ಹರ್ಷ ಕಾಣುತ್ತಿದೆ. ಮುಂಗಾರು ಕೈ ಕೊಟ್ಟಿದ್ದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿ ತೊಂದರೆಗೆ ಒಳಗಾಗಬೇಕಿತ್ತು.
  ತಾಲೂಕಿನಲ್ಲಿ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಧಾನ್ಯ ಬೆಳೆ ಬೆಳೆಯುತ್ತಿದ್ದು ಎಳ್ಳು, ಹೆಸರು, ಉದ್ದು, ಸೂರ್ಯಕಾಂತಿ, ಜೋಳ, ಹೆಸರು ಸೇರಿದಂತೆ ಹಲವು ಬೆಳೆ ಬೆಳೆಯುವ ಸನ್ನಾಹಲ್ಲಿದ್ದಾರೆ. ಅದಕ್ಕೆ ತಕ್ಕಂತೆ ಮಳೆಯ ಅವಶ್ಯಕತೆ ಇದ್ದುದರಿಂದ ಸಮಯಕ್ಕೆ ಸರಿಯಾಗಿ ಮಳೆ ಬಂದಿದೆ. ಇದರಿಂದ ಹಾಕಿರುವ ಬೆಳೆಗಳು ಚೇತರಿಸಿಕೊಂಡು ರೈತರು ಹಾಕಿದ ಬಂಡವಾಳಕ್ಕೆ ಮೋಸವಾಗದು ಎಂದು ತಿಳಿಯಲಾಗಿದೆ.     
ಒಣಗಿದ್ದ ಮರಗಳು: ಏಳು ವರ್ಷಗಳಿಂದ ತಾಲೂಕಿನಲ್ಲಿ ಒಂದು ಬಾರಿಯೂ ಜೋರಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ಹಸಿರಿನಿಂದ ನಳನಳಿಸುತ್ತಿದ್ದ ಅಡಕೆ, ತೆಂಗಿನ ತೋಟಗಳು ಒಣಗಿ, ಕೊಳವೆಬಾವಿಗಳಲ್ಲಿಯೂ ನೀರ ಸೆಲೆ ಇಲ್ಲದಾಗಿತ್ತು.
ಇನ್ನೂ ಹೆಚ್ಚಿನ ಮಳೆ ಮುಂದುವರಿದಲ್ಲಿ ತೋಟ ಮತು ಬೆಳೆಗಳು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ಕುಡಿಯುವ ನೀರಿನ ಸಮಸ್ಯೆಯೂ ಸ್ವಲ್ಪ ಮಟ್ಟಿಗೆ ಪರಿಹಾರವಾಗಿ ಅಪರೂಪವಾಗಿರುವ ನಲ್ಲಿಗಳಲ್ಲಿ ನೀರು ಬರುವುದೇ ಎಂದು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.