ಡೆಂಘಿಗೆ ಮಹಿಳೆ ಬಲಿ
ಶಿವಮೊಗ್ಗ: ಜಿಲ್ಲೆಯಲ್ಲಿ ಡೆಂಘಿ ತನ್ನ ಅಟ್ಟಹಾಸ ಮೆರೆದಿದ್ದು, ಶುಕ್ರವಾರ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಕಡೂರು ಮೂಲದ ರೀಟಾ (65) ಮೃತಪಟ್ಟವರು. ಒಂದು ವಾರದಿಂದ ಜ್ವರಕ್ಕೆ ಚಿಕಿತ್ಸೆಗೆಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಗುರುವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ ಡೆಂಘಿ ಮುಂಜಾಗ್ರತೆ ಕುರಿತು ಜಿಲ್ಲಾಧಿಕಾರಿಯವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು.
ಸಾಂಬಾರು ಸಸಿ ವಿತರಣೆ
ಚಿಕ್ಕಮಗಳೂರು: ಸಾಂಬಾರ ಮಂಡಳಿ ವತಿಯಿಂದ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ಕೊಡುವ ಸಾಂಬಾರು ಬೆಳೆಗಳ ಸಸಿಗಳನ್ನು ಸಸ್ಯಪಾಲನಾ ಕೇಂದ್ರಗಳಿಂದ ನಿಗದಿತ ದರಗಳಿಗೆ ಮಾರಾಟ ಮಾಡಲಿದೆ.
ಏಲಕ್ಕಿ ಹಾಗೂ ಕಾಳು ಮೆಣಸು ಸಸಿಗಳನ್ನು ಕೊಪ್ಪ ತಾಲೂಕಿನ ನಾರ್ವೆಯ ಬೆಳೆಗೊಳ, ಮೂಡಿಗೆರೆ ತಾಲೂಕಿನ ಬೆಟ್ಟದಮನೆ, ಸಕಲೇಶಪುರದ ಯಸಳೂರು, ಸೋಮವಾರಪೇಟೆಯ ಐಗೂರು, ಮಡಿಕೇರಿಯ ಬಿಳಿಗಿರಿ ಸಸ್ಯಪಾಲನಾ ಕೇಂದ್ರಗಳಲ್ಲಿ ವಿತರಿಸಲಾಗುವುದು. ಆಸಕ್ತ ಬೆಳೆಗಾರರು ಅರ್ಜಿಗಳನ್ನು ಜೂನ್ 15 ರೊಳಗೆ ಸಲ್ಲಿಸಬಹುದಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಸಾಂಬಾರು ಮಂಡಳಿಗಳನ್ನು ಸಂಪರ್ಕಿಸಲು ಅಥವಾ ಉಪ ನಿರ್ದೇಶಕರ ಕಚೇರಿ, ಸಾಂಬಾರು ಮಂಡಳಿ, ಸಕಲೇಶಪುರ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಶೃಂಗೇರಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ 2013-14 ನೇ ಸಾಲಿನ ಬಿಎ, ಬಿಬಿಎಂ, ಬಿಕಾಂ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದಂಡ ಶುಲ್ಕ ರಹಿತ ಪ್ರವೇಶ ಪಡೆಯಲು ಜೂನ್ 8 ಕೊನೆಯ ದಿನವಾಗಿರುತ್ತದೆ. ಕುವೆಂಪು ವಿವಿ ನಿಯಮಾವಳಿಗಳನ್ವಯ ಆಯ್ಕೆ ಪ್ರಕಿಯೆ ನಡೆಯಲಿದ್ದು, ಪ್ರವೇಶ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಕಾಲೇಜು ಕಚೇರಿಯಲ್ಲಿ ನಿಗದಿತ ನಮೂನೆಯ
ಅರ್ಜಿಪಡೆದು ಕೊನೆಯ ದಿನಾಂಕದೊಳಗೆ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ವಿವರಗಳಿಗೆ ಕಾಲೇಜು ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ದೂ-08265-250180.
ನಾಳೆ ರೈತಸಂಘ ಪ್ರತಿಭಟನೆ
ಶಿವಮೊಗ್ಗ: ಗುಟ್ಕಾ ನಿಷೇಧಕ್ಕೆ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತಸಂಘವು ಪ್ರತಿಭಟನೆ ನಡೆಸಲು ಮುಂದಾಗಿದೆ.
ರೈತಸಂಘದ ಮಹಾ ಪ್ರಧಾನಕಾರ್ಯದರ್ಶಿ ಎಚ್.ಆರ್. ಬಸವರಾಜಪ್ಪ ಅವರು ಗುಟ್ಕಾ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರವು ಸಿಗರೇಟು, ಮದ್ಯಪಾನ ನಿಷೇಧಿಸದೇ ಕೇವಲ ಗುಟ್ಕಾ ಉತ್ಪನ್ನಗಳನ್ನು ನಿಷೇಧಿಸಲು ಮುಂದಾಗಿರುವುದು ಸರಿ ಅಲ್ಲ. ರಾಜ್ಯದ 10 ಜಿಲ್ಲೆಗಳಲ್ಲಿ ಲಕ್ಷಾಂತರ ರೈತರು ಇದೇ ಬೆಳೆಯನ್ನು ಅವಲಂಭಿಸಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

