ಕನಕ ಜಯಂತಿ: ಪೂರ್ವಭಾವಿ ಸಭೆ
ನರಸಿಂಹರಾಜಪುರ: ನ.20 ರಂದು ನಡೆಯುವ ಕನಕ ಜಯಂತಿ ಆಚರಣೆ ಬಗ್ಗೆ ಪೂರ್ವಭಾವಿ ಸಭೆಯು ತಹಸೀಲ್ದಾರ್ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯ ಆವರಣದಲ್ಲಿ ಬುಧವಾರ ನಡೆಯಿತು. ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ಕೃಷ್ಣಮೂರ್ತಿ, ಕನಕ ಜಯಂತಿ ಸಮಾರಂಭಕ್ಕೆ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚಿಸಿದರು. ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನ.20 ರಂದು ಬೆಳಿಗ್ಗೆ 10 ಗಂಟೆಗೆ ಕನಕ ಜಯಂತಿ ಸಮಾರಂಭ ಆಚರಿಸಲು ಹಾಗೂ ಶಿಷ್ಚಾಚಾರದಂತೆ ಸಭೆಗೆ ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸಲು ಸಭೆ ನಿರ್ಧರಿಸಿತು. ಸರ್ಕಾರಿ ಪ್ರಥಮ ದಜೆ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕ ಅಣ್ಣಪ್ಪ ಎನ್. ಮಳೀಮಠ ಅವರಿಂದ ಕನಕದಾಸರ ಕುರಿತು ಉಪನ್ಯಾಸ ಏರ್ಪಡಿಸುವುದು, ಬಾಳೆಹೊನ್ನೂರಿನ ಎಚ್ಪಿಎಸ್ ಶಾಲೆಯ ಸಂಗೀತ ಶಿಕ್ಷಕ ಪಂಚಾಕ್ಷರಿ ಹಾಗೂ ನ.ರಾ.ಪುರ ಎಚ್ಪಿಎಸ್ ಶಾಲೆಯ ಸಂಗೀತ ಶಿಕ್ಷಕ ಸುರೇಶ್ ಅವರನ್ನು ಕನಕದಾಸರ ಕೀರ್ತನೆ ಹಾಡುವಂತೆ ಆಹ್ವಾನಿಸಲು ಸಭೆಯಲ್ಲಿ ತೀರ್ಮಾನವಾಯಿತು.
ಸಭೆಯಲ್ಲಿ ಗ್ರೇಟ್ -2 ತಹಸೀಲ್ದಾರ್ ಎಂ. ಲೋಕೇಶಪ್ಪ, ಸಿಡಿಪಿಓ ಜ್ಯೋತಿಲಕ್ಷ್ಮಿ, ತಾಲೂಕು ಪಂಚಾಯ್ತಿ ಸಹಾಯ ನಿರ್ದೇಶಕ ಎಸ್.ವಿ. ರಾಜೇಗೌಡ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಲಲಿತ, ಪ.ಪಂ. ಆರೋಗ್ಯಾಧಿಕಾರಿ ವೈ.ಎಂ. ಲಕ್ಷ್ಮಣ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

