ಚಿಕ್ಕಮಗಳೂರು

ಸುದ್ದಿ ಸಂಕ್ಷೇಪ

Published On :

ಇಂದಿರಾಗಾಂಧಿ ಜನ್ಮದಿನಾಚರಣೆ
ನರಸಿಂಹರಾಜಪುರ: ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮವು ಮಂಗಳವಾರ ನಡೆಯಿತು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಲಕ್ಷ್ಮಣ ಶೆಟ್ಟರು, ಕೆ.ಎ.ಅಬೂಬಕರ್, ಇ.ಸಿ. ಜೋಯಿಸ್, ವಕೀಲ ದಿವಾಕರ್, ಟಿ.ಎಸ್. ಜೋಸ್, ಕೆ.ಎ. ಪಿಜು, ಜೇಕಬ್ ಪೀಟರ್,ಎಂ.ಜಿ. ಫೌಲೋಸ್, ಜಗದ್ಪಾಲ್ ಶೆಟ್ಟರು ಮುಂತಾದವರು ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಬಿಡಿ ಸುದ್ದಿ
ಪದಾಧಿಕಾರಿ ಆಯ್ಕೆ
ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಮಸೀದಿಕೆರೆಯ ಅಲ್ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಟಿ.ಎಂ. ನಾಸಿರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮದರಸದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು. ಅಬೂಬಕರ್ ಹಾಜಿ, ಕೆ.ಸಿ. ಬೇರಿ, ಎಂ. ಮಹಮ್ಮದ್ (ಗೌರವಾಧ್ಯಕ್ಷರು), ಮಹಮ್ಮದ್ ಆಲಿ (ಉಪಾಧ್ಯಕ್ಷ), ಎಸ್.ಎಚ್. ಮೊಯ್ಯದ್ದಿ (ಪ್ರಧಾನ ಕಾರ್ಯದರ್ಶಿ), ಅಬ್ದುಲ್ ಲತೀಫ್, ಶಾಹೀದ್ (ಸಹ ಕಾರ್ಯದರ್ಶಿ), ಅಬ್ದುಲ್ ರಜಾಕ್ (ಕೋಶಾಧಿಕಾರಿ), ಪುತ್ತುಮೋನು, ಅಹ್ಮದ್ ಝಮೀರ್, ಮಹಮ್ಮದ್ ಹನೀಫ್, ಸೈದಾಲಿ, ಎಂ.ಆರ್. ಅಶ್ರಫ್, ಕೆ.ಎ. ಅಬ್ದುಲ್ ಖಾದರ್, ಟಿ.ಟಿ. ಮೈದಿನ್ (ಸದಸ್ಯರು) ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.  
ತಾಲೂಕು ಬಿಜೆಪಿ ಪದಾಧಿಕಾರಿ ಆಯ್ಕೆ
ನರಸಿಂಹರಾಜಪುರ ತಾಲೂಕು ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ತಾಲೂಕು ಸಮಿತಿ ರಚನೆಗೊಂಡಿದೆ. ಭಾಸ್ಕರ್ ವೆನಿಲ್ಲಾ (ಅಧ್ಯಕ್ಷ), ಬಿ.ಬಿ. ಶಂಕರ್ ಖಾಂಡ್ಯ, ರಾಜಪ್ಪಗೌಡ ಬನ್ನೂರು, ಕೆ.ಟಿ. ಸತೀಶ ಹೊನ್ನೆಕೊಡಿಗೆ, ಕೆ.ಎಸ್. ಉಮೇಶ್ ಸೀತೂರು, ಆರ್. ಹೂವಪ್ಪ, ಮುನಿಯಮ್ಮ, ಜಯಣ್ಣ ಸುತ್ತಾ (ಉಪಾಧ್ಯಕ್ಷರು), ಎಸ್. ಗೋಪಾಲ್, ವೈ.ಎಸ್. ಗಣೇಶ್ ಯಡಗೆರೆ, ಪ್ರಸಾದ್ ಹೆಗ್ಡೆ ಖಾಂಡ್ಯ (ಪ್ರಧಾನ ಕಾರ್ಯದರ್ಶಿ). ಕೇಶವ ನೆಲಗದ್ದೆ, ಸೀಮಾನ್ ಸೌತಿಕೆರೆ, ಈಶ್ವರ್ ನಾಯಕ್, ಗುಂಡಪ್ಪ, ಚಂದ್ರಶೇಖರ್ ಕಟ್ಟಿನಮನೆ, ಎಂ. ರಮೇಶ್ ಅಳಲಗೆರೆ, ಎಂ.ಟಿ. ಶ್ರೀನಿವಾಸ್ ಶೆಟ್ಟಿಕೊಪ್ಪ, ಸೈಪುಲ್ಲಾ ಖಾನ್, ಮಂಜುನಾಥ್ ಲಾಡ್ (ಕಾರ್ಯದರ್ಶಿ), ಆಶೀಸ್‌ಕುಮಾರ್, ಬಿ. ಜಗದೀಶ್ಚಂದ್ರ, ಸುರೇಶ್ ಎಸ್. ಪೇಟೆ (ವಕ್ತಾರರು) ಇನ್ನುಳಿದಂತೆ ಸದಸ್ಯರು ತಾಲೂಕು ಸಮಿತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.