ಪೋಷಕರ ದಿನಾಚರಣೆ
ನರಸಿಂಹರಾಜಪುರ: ಆಧುನಿಕತೆ ಪ್ರಭಾವದಿಂದ ಅವಿಭಕ್ತ ಕುಟುಂಬಗಳು ಮಾಯವಾಗುತ್ತಿದ್ದು, ಮಕ್ಕಳಿಗೆ ಸಂಬಂಧಗಳ ಮಹತ್ವದ ಬಗ್ಗೆ ತಿಳಿವಳಿಕೆ ಇಲ್ಲವಾಗಿದೆ ಎಂದು ಶೆಟ್ಟಿಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಿಬಿಎಸ್ ನಾಗೇಶ್ ತಿಳಿಸಿದರು. ಮಂಗಳವಾರ ಮೆಣಸೂರಿನ ಮೌಂಟ್ ಕಾರ್ಮೆಲ್ ಪಪೂ ಕಾಲೇಜಿನಲ್ಲಿ ನಡೆದ ಪೋಷಕರ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿ, ಮಕ್ಕಳಲ್ಲಿ ಆತ್ಮಾಭಿಮಾನ, ಮಾನವೀಯತೆ ಗುಣ ಮತ್ತು ಸ್ವಾಭಿಮಾನವನ್ನು ಬೆಳೆಸಲು ಪೋಷಕರು ಶ್ರಮಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಲಿಟಲ್ ಪ್ಲವರ್ ಚರ್ಚ್ನ ಫಾ. ಸೆಬಾಸ್ಟಿನ್ ಪಾನಾಪುಯ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಇ.ಸಿ. ಶೇವಿಯಾರ್, ಕಾರ್ಮಲ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಎಲ್ಲಾ ಮರಿಯಾ ಮಾತನಾಡಿದರು.
ಸಕ್ಕರೆ ಕಾಯಿಲೆ ನಿರ್ಲಕ್ಷ್ಯ ಸಲ್ಲ
ಬಾಳೆಹೊನ್ನೂರು: ಸಕ್ಕರೆ ಕಾಯಿಲೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ವ್ಯಕ್ತಿ ತನ್ನ ದಷ್ಟಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಚಿಕ್ಕಮಗಳೂರಿನ ನೇತ್ರ ತಜ್ಞ ಡಾ. ಚೈತನ್ಯ ಸವೂರ್ ಹೇಳಿದ್ದಾರೆ. ಇಲ್ಲಿನ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ರೋಟರಿ ಭವನದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಎಚ್.ಎಂ. ಇಬ್ರಾಹಿಂ ಮಾತನಾಡಿ, ಈ ನೇತ್ರ ತಪಾಸಣಾ ಶಿಬಿರದಲ್ಲಿ ಒಟ್ಟು 202 ಜನ ತಪಾಸಣೆಗೆ ಒಳಗಾಗಿದ್ದು, ಈ ಪೈಕಿ ಅಗತ್ಯವಿರುವ 13 ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು ಎಂದು ತಿಳಿಸಿದರು. ರೋಟರಿ ಕಾರ್ಯದರ್ಶಿ ಕೆ.ಎಚ್. ನಾಗೇಶ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ವೈಶಾಲಿ ವಿ.ಕುಡ್ವ, ಕಾರ್ಯದರ್ಶಿ ವಿದ್ಯಾ ಆರ್.ಪೈ, ರೋಟರಿ ಸದಸ್ಯ ಎಚ್.ಎಚ್. ಕೃಷ್ಣಮೂರ್ತಿ, ಸುರೇಶ್, ನೇತ್ರ ಪರೀಕ್ಷಕ ಗಿರೀಶ್, ರಶೀದ್, ಸಲ್ಮಾನ್ ಉಪಸ್ಥಿತರಿದ್ದರು. ಬಾಳೆಹೊನ್ನೂರಿನ ರೋಟರಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

