ಕಿಗ್ಗಾ ದೇವಾಲಯ: ರುದ್ರಹೋಮ
ಶೃಂಗೇರಿ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಿಗ್ಗಾ ಶ್ರೀ ಶೃಷ್ಯ ಶೃಂಗೇಶ್ವರ ದೇವಾಲಯದಲ್ಲಿ ಸೋಮವಾರ ಕಿಗ್ಗಾ ಸೀಮೆ ರುದ್ರಹೋಮ ನಡೆಯಿತು. ಮಳೆ ಬೆಳೆ ಸಮೃದ್ಧಿಗಾಗಿ ನಡೆದ ಈ ರುದ್ರಹೋಮದಲ್ಲಿ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನೆರೆದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ತಿಕ ಮಾಸದ ಕೊನೆಯ ಸೋಮವಾರವಾದ ಮುಂದಿನ ಡಿಸೆಂಬರ್ 2 ರಂದು ನೆಮ್ಮಾರು ಸೀಮೆ ರುದ್ರಹೋಮ ನಡೆಯಲಿದೆ. ಅಂದು ಸಂಜೆ ಭಕ್ತಾದಿಗಳಿಂದ ಬೀದಿ ದೀಪೋತ್ಸವ ಕಾರ್ಯಕ್ರಮ ನೆರವೇರಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.
ಯಶಸ್ವಿ ಬೀದಿ ನಾಟಕ ಪ್ರದರ್ಶನ
ತರೀಕೆರೆ: ವಿಕಸನ ಸಂಸ್ಥೆ, ಕಾನೂನು ಸೇವಾ ಪ್ರಾಧಿಕಾರ, ದಿ ಹಂಗರ್ ಪ್ರಾಜೆಕ್ಟ್ ಬೆಂಗಳೂರು ವತಿಯಿಂದ ಸೋಮವಾರ ನ್ಯಾಯಾಲಯ ಆವರಣದಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ತಾಲೂಕು ಮಟ್ಟದ ಜಾಗೃತಿ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ವಿಕಸನ ಕಲಾ ತಂಡದ ಕಲಾವಿದರು ಪ್ರದರ್ಶಿಸಿದ ಮಹಿಳಾ ದೌರ್ಜನ್ಯದ ವಿರುದ್ಧ ವರದಕ್ಷಿಣೆ ಪಿಡುಗು ಕಥಾವಸ್ತುವಿನ ಬೀದಿ ನಾಟಕ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಲಾವಿದ ಶ್ರೀನಿವಾಸ್, ಎಂ.ಎಚ್. ಲಕ್ಷ್ಮಣ್, ಮುಕುಂದ್, ಪ್ರಭಾವತಿ, ವಿಮಲ, ಪಾರ್ವತಿ ಮತ್ತು ಭಾಗ್ಯ ಅವರುಗಳು ಬೀದಿ ನಾಟಕದಲ್ಲಿ ಅಭಿನಯಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

