ಕಾನೂನು ಗೌರವಿಸುವುದು ಕರ್ತವ್ಯ: ಪದ್ಮಪ್ರಸಾದ್
ಮೂಡಿಗೆರೆ: ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ. ಕಾನೂನಿನ ಅರಿವಿಲ್ಲದ ವಿದ್ಯಾವಂತರೆ ಅನೇಕ ಬಾರಿ ಶೊಷಣೆಗೆ ಒಳಗಾಗುತ್ತಾರೆ. ಕಾನೂನಿನ ಬಗ್ಗೆ ಅಸಡ್ಡೆ ತೋರದೆ ಕಾನೂನನ್ನು ಗೌರವಿಸುವುದನ್ನು ಕಲಿಯಬೇಕು ಎಂದು ಮೂಡಿಗೆರೆ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರ.ದ.ನ್ಯಾ. ಡಂಡಾಧಿಕಾರಿ ಪದ್ಮಪ್ರಸಾದ್ ತಿಳಿಸಿದರು.
ಜೆಎಸ್ ಶಾಲೆಯಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ನಾಗರಿಕ ಹಕ್ಕುಗಳು, ಸಂವಿಧಾನದ ಬಗ್ಗೆ ಅರಿವು, ಸಂವಿಧಾನದಿಂದ ಅನೂಕೂಲ, ಉಚಿತ ಕಾನೂನು ನೆರವು ಕುರಿತು ಮಾಹಿತಿ ನೀಡಿದರು.
ಜೆಎಸ್ ಶಾಲೆ ಪ್ರಾಂಶುಪಾಲ ಶಕೀಲಾ ಖಾತುನ್ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ. ವಿದ್ಯವಂತರಾದ ನಾವು ಕಾನೂನನ್ನು ಗೌರವಿಸಬೇಕು. ಅದರಂತೆ ನಡೆದುಕೊಳ್ಳಬೇಕು. ಎಷ್ಟು ವಿದ್ಯೆ ಇದ್ದರೇನು, ಕಾನೂನು ಅರಿವಿಲ್ಲದ ಮನುಷ್ಯ ವಿವಿಧ ಶೊಷಣೆಗಳಿಗೆ ಒಳಗಾಗುತ್ತಾನೆ ಎಂಬುವುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.
ವಕೀಲ ಜಯರಾಮ್ ಉಪನ್ಯಾಸ ನೀಡಿದರು. ಸರ್ಕಾರಿ ಸಹಾಯಕ ಅಭಿಯೋಜಕ ಅರುಣ್, ವಕೀಲರಾದ ನಟರಾಜ್, ಪ್ರಸನ್ನ ಕುಮಾರ್, ಡಿ.ಎಸ್. ಸುರೇಂದ್ರ, ಜಗದೀಶ್, ಮೋಹಿತ್, ರಾಘವೇಂದ್ರ ಇದ್ದರು.
ಚಾನಲ್ಗೆಬಿದ್ದ ಮಗು ಶವ ಪತ್ತೆ
ಶಿವಮೊಗ್ಗ: ಇಲ್ಲಿನ ಜೆಪಿ ನಗರದ ಮನೆ ಮುಂಭಾಗ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ ಬಾಲಕಿಯರಿಬ್ಬರಲ್ಲಿ ಒಬ್ಬಾಕೆಯ ಶವ ರವೀಂದ್ರ ನಗರ ತುಂಗಾ ನಾಲೆಯಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ. ಜೆಪಿ ನಗರದ ವಾಸಿ ಅಲ್ಲಾವುದೀನ್ ಎಂಬುವರ ಮಕ್ಕಳಾದ ಸುಬಾನ (10), ಸುಮಯ್ಯ (8) ಸೋಮವಾರ ನಾಪತ್ತೆಯಾಗಿದ್ದರು. ಪೋಷಕರು ಮಕ್ಕಳಿಗಾಗಿ ಎಲ್ಲೆಡೆ ಹುಡುಕಾಡಿ ರಾತ್ರಿ ಮನೆಗೆ ವಾಪಸಾಗಿದ್ದರು. ಮಂಗಳವಾರ ಸಂಜೆ ವೇಳೆಗೆ ಸುಮಯ್ಯ ಶವ ರವೀಂದ್ರ ನಗರ ವಿವೇಕಾನಂದ ಚಾನಲ್ನಲ್ಲಿ ಪತ್ತೆಯಾಯಿತು. ಸುಬಾನ ನಾಪತ್ತೆಯಾಗಿದ್ದು, ಪ್ರಕರಣ ದಾಖಲಾಗಿದೆ.
ಮಕ್ಕಳು ಚಾನಲ್ಗೆ ಜಾರಿ ಬಿದ್ದರೆ ಅಥವಾ ಆಟವಾಡಲು ಹೋದಾಗ ತೇಲಿಹೋದರೆ ಎಂಬುದು ಇನ್ನೂ ಖಚಿತವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

