ಚಿಕ್ಕಮಗಳೂರು

ಮೋಟಮ್ಮ ಮನೆ ಮೇಲೆ ದಾಳಿ

Published On :

ಮೂಡಿಗೆರೆ: ಅಕ್ರಮ ಮದ್ಯದ ಬಾಟಲಿಗಳು ಹಾಗೂ ಲಕ್ಷಾಂತರ ಹಣ ಸಂಗ್ರಹಿಟ್ಟಿರುವ ಬಗ್ಗೆ ಕಂಟ್ರೋಲ್ ರೂಂಗೆ ಬಂದ ಕರೆಯನ್ವಯ ತಹಸೀಲ್ದಾರ್ ನೇತೃತ್ವದಲ್ಲಿ ಚುನಾವಣಾ ಸಂಚಾರಿ ದಳದ ಅಧಿಕಾರಿಗಳು ವಿಧಾನಪರಿಷತ್ ಸದಸ್ಯೆ ಡಾ.ಮೋಟಮ್ಮ ಅವರ ಮನೆ ಮೇಲೆ ಸೋಮವಾರ ದಾಳಿ ನಡೆಸಿ ಪರಿಶೀಲಿಸಿದರು.
ಬೆಳಗ್ಗೆ 10 ಗಂಟೆಗೆ ಬಂದ ಕರೆ ಸ್ವೀಕರಿಸಿದ ಅಧಿಕಾರಿಗಳು 10 ನಿಮಿಷದಲ್ಲಿ ತಹಸೀಲ್ದಾರ್ ಶಾರದಾಂಬ ನೇತೃತ್ವದಲ್ಲಿ ಸಂಚಾರಿ ದಳದ ವಿಶೇಷ ದಂಡಾಧಿಕಾರಿ ರವೀಂದ್ರ, ಸದಸ್ಯ ಅಬಕಾರಿ ಅಧಿಕಾರಿ ರವೀಶ್ ನೇತೃತ್ವದ ತಂಡ ದಾಳಿ ನಡೆಸಿದು. ಆಗ ಡಾ. ಮೋಟಮ್ಮ ಮತ್ತು ತಹಸೀಲ್ದಾರ್ ನಡುವೆ ವಾದ- ವಿವಾದವೂ ನಡೆಯಿತು.
ವಾದಕ್ಕೆ ಮಣಿಯದ ತಹಸೀಲ್ದಾರರು ಚುನಾವಣಾ ಆಯೋಗದ ಆದೇಶವಿರುವುದಾಗಿ ತಿಳಿಸಿ, ಮೋಟಮ್ಮ ಅವರ ಮನೆಯಲ್ಲಿ ಶೋಧ ಕಾರ್ಯ ಕೈಗೊಂಡರು.
ಆಯೋಗದ ಸದಸ್ಯರು ಮನೆ ಪರಿಶೀಲಿಸಿದಾಗ ಅಲ್ಲಿ ಯಾವುದೇ ರೀತಿಯ ಮದ್ಯದ ಬಾಟಲಿಗಳು ಮತ್ತು ಹಣ ದೊರೆಯದೆ ಹಿಂದಿರುಗಿದರು. ತಂಡದ ಜೊತೆಯಲ್ಲಿದ್ದ ವೀಡಿಯೋ ಗ್ರಾಫರ್ ಮತ್ತು ಪತ್ರಕರ್ತರಿಗೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು  ನಿರ್ಬಂಧ ಹೇರುವುದರೊಂದಿಗೆ ಮನೆಯ ಒಳಗಿನ ಬಾಗಿಲು ಹಾಕಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.