ವೈಭವದ ಕಿಗ್ಗಾ ರಥೋತ್ಸವ
ಶೃಂಗೇರಿ: ಪ್ರಕೃತಿಯ ಮಡಿಲು, ನಿಸರ್ಗದತ್ತ ರಮಣೀಯ ನರಸಿಂಹಪರ್ವತದ ತಪ್ಪಲಲ್ಲಿರುವ ಮಲೆನಾಡಿನ ಮಳೆ ದೇವರು ಎಂದೇ ಪ್ರಸಿದ್ಧವಾದ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಿಗ್ಗಾ ಶಾಂತಾ ಸಮೇತ ಋಷ್ಯಶೃಗೇಶ್ವರ ಸ್ವಾಮಿ ಮಹಾರಥೋತ್ಸವ ಸೋಮವಾರ ವೈಭವಯುತವಾಗಿ ನಡೆಯಿತು.
ರಥೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಸೋಮವಾರ ಬೆಳಗ್ಗೆ ಯಿಂದಲೇ ವಿಶೇಷ ಧಾರ್ಮಿಕ ಕಾರ್ಯ ವಿಧಿವಿಧಾನಗಳು, ವಿಶೇಷ ಪೂಜೆ ನಡೆಯಿತು. ರುದ್ರಾಭಿಷೇಕ ಸಹಿತ ವಿಶೇಷ ಪೂಜೆ, ಧಾರ್ಮಿಕ ಕ್ರಿಯಾವಿಧಿ ವಿಧಾನಗಳು ನಡೆಯಿತು.
ಮಲ್ಲಿಕಾರ್ಜುನ ಸ್ವಾಮಿ, ಮಹಾಲಿಂಗೇಶ್ವರ, ಸುತ್ತಿನ ದೇವರು, ದ್ವಿಭುಜ ಗಣಪತಿ, ದುರ್ಗಾಂಬಾ, ನಂದಿ ಮಂಟಪದಲ್ಲಿನ ದೇವರಿಗೆ ವಿಶೇಷ ಪೂಜೆ ನೆರವೇರಿತು.
ಕಳೆದೆರೆಡು ದಿನಗಳಿಂದ ಈ ಭಾಗದಲ್ಲಿ ಮಳೆ ಬೀಳುತ್ತಿದ್ದು, ಸೋಮವಾರ ಮಾತ್ರ ಮಳೆರಾಯ ಯಾವುದೇ ರೀತಿಯ ಅಡ್ಜಿಬಾರದಂತೆ ಸ್ವಾಮಿಯ ಉತ್ಸವ ಕಾರ್ಯದಿಂದ ಬಲುದೂರ ಉಳಿದಿದ್ದ.
ರಥ ಸಾಗುವ ಮುನ್ನ ಶುಭ್ರಗೊಳಿಸಿದ ರಸ್ತೆಯ ಮೇಲೆ ರಂಗೋಲಿ, ಚಿತ್ತಾರಗಳಿಂದ ಸಿಂಗರಿಸಲಾಗಿತ್ತು. ರಥ ಸಾಗುವ ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಭಕ್ತರು ಸ್ವಾಮಿಯ ದರ್ಶನ ಪಡೆದರು.
ಮಂಗಳವಾರ ಸ್ವಾಮಿಗೆ ಓಕಳಿ, ಸಂದಾನೋತ್ಸವ ನಡೆಯಲಿದೆ. ಬೀದಿ ಪಲ್ಲಕ್ಕಿ ಉತ್ಸವ, ಅವಭೃತ ನಡೆಯಲಿದೆ. ಎರಡು ದಿನಗಳ ಕಾಲ ಈ ಭಾಗದ ಗ್ರಾಮಗಳ ಸುತ್ತಮುತ್ತಲಿನ ಜನರು ಜಾತ್ರಾ ಮಹೋತ್ಸವನ್ನು ಹಬ್ಬದ ದಿನವನ್ನಾಗಿ ಆಚರಿಸುತ್ತಾರೆ. ಸಂಪ್ರೋಕ್ಷಣೆ, ಶೈವ ಮಹಾಯಾಗದ ಮುಕ್ತಾಯದೊಂದಿಗೆ ಈ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

