ಚಿಕ್ಕಮಗಳೂರು

ಮೋದಿ ಜಪದಲ್ಲಿ ಕಾಂಗ್ರೆಸ್

Published On :

ಕಾಂಗ್ರೆಸ್ ಮೋದಿ ಜಪದಲ್ಲಿ ತೊಡಗಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.ಆಡಳಿತದಲ್ಲಿದ್ದ ರಾಜಕೀಯ ಪಕ್ಷ ತಮ್ಮ ಸರ್ಕಾರದ ಸಾಧನೆ ಮೇಲೆ ಚುನಾವಣೆ ಎದುರಿಸಬೇಕು. ಪ್ರತಿಪಕ್ಷಗಳು ಜನರ ಮುಂದೆ ಪ್ರಣಾಳಿಕೆಯನ್ನಿಟ್ಟು ಮತ ಕೇಳಬೇಕು. ಇದು, ರಾಜಕೀಯದ ಒಂದು ಸಂಪ್ರದಾಯ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಕರ್ತವ್ಯ ಮರೆತಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಹತಾಶೆಯ ಹೇಳಿಕೆ ನೀಡುತ್ತಿದ್ದಾರೆ. ನಾಲಿಗೆಯ ಮೇಲೆ ಹತೋಟಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನವರಿಗೆ ಹೇಳಿಕೊಳ್ಳಲು ಯಾವುದೇ ಸಾಧನೆ ಇಲ್ಲ. ಕೋಟ್ಯಂತರ ರು.ಗಳ ವಿವಿಧ ಹಗರಣ, ಬೆಲೆ ಏರಿಕೆ, ಭಯೋತ್ಪಾದನೆ ಬೆಳೆಯಲು ಮತ್ತು ಬಲಿಷ್ಠಗೊಳ್ಳಲು ಅವಕಾಶ, ದೇಶದ ಗಡಿ ರಕ್ಷಣೆ ಮತ್ತು ಗೌರವ ಎತ್ತಿಹಿಡಿಯುವಲ್ಲಿ ವಿಫಲ, ನಿರುದ್ಯೋಗದಿಂದ ಜನರು ವಲಸೆ ಹೋಗುವುದನ್ನು ತಡೆಯುವಲ್ಲಿ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿರುವುದೇ ಕೇಂದ್ರದ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಟೀಕಿಸಿದರು.
ಈ ಬಾರಿಯ ಲೋಕಸಭೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ. ಆ ಪರಿಸ್ಥಿತಿ ನಿರ್ಮಾಣ ಆಗಬಾರದೆಂದರೆ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಬೆಂಬಲಿಸಬೇಕು. ವಿದೇಶಾಂಗ ನೀತಿ ಎಂದರೆ ನೆರೆಹೊರೆ ರಾಷ್ಟ್ರಗಳೊಂದಿಗೆ ಸೌಹಾರ್ದತೆ ಇರುವುದೆಂದಲ್ಲ. ನಮ್ಮ ದೇಶದ ಭದ್ರತೆ ಎಂದರ್ಥ. ಭಯೋತ್ಪಾದಕರನ್ನು ರಪ್ತು ಮಾಡುವ ದೇಶಗಳೊಂದಿಗೆ ಸಂಬಂಧ ಬೆಳೆಸುವುದು ಬೇಡ. ಈ ಕಾರಣದಿಂದಲೇ ದೇಶದ ಜನರು ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ನಿಶ್ಚಯಿಸಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.