ತರೀಕೆರೆಯಲ್ಲೂ ಸರ್ವ ತಯಾರಿ
ತರೀಕೆರೆ: ಇಂದು ಮತದಾನಕ್ಕೆ ತರೀಕೆರೆ ಕ್ಷೇತ್ರದಲ್ಲಿ ತಾಲೂಕು ಅಡಳಿತ ಸಕಲ ಸಿದ್ಧತೆ ನಡೆಸಿದೆ. ಎಸ್ಜೆಎಂ ಕಾಲೇಜಿನಲ್ಲಿ ಉಪವಿಭಾಗಾಧಿಕಾರಿ ಅನುರಾಧ ಮತ್ತು ತಹಸೀಲ್ದಾರ್ ಶಿವಕುಮಾರ್ ಅವರು ಮತಗಟ್ಟೆ ಅಧಿಕಾರಿಗಳಿಗೆ, ಚುನಾವಣೆ ಸಿಬ್ಬಂದಿಗೆ ಮತ ಯಂತ್ರ ಮತ್ತಿತರ ಚುನಾವಣಾ ಸಾಮಗ್ರಿಗಳನ್ನು ವಿತರಿಸಿದರು. ಚುನಾವಣೆಗಾಗಿ ತರೀಕರೆ ಲೋಕಸಭಾ ಕ್ಷೇತ್ರದಲ್ಲಿ 221 ಮತಗಟ್ಟೆ ಸ್ಥಾಪಿಸಲಾಗಿದ್ದು, ವಿವಿಧ ಮತಕೇಂದ್ರಗಳಿಗೆ 32 ಸರ್ಕಾರಿ ಬಸ್ಸುಗಳಲ್ಲಿ ಮತಗಟ್ಟೆ ಅಧಿಕಾರಿ, ಇತರ ಸಿಬ್ಬಂದಿ ಕಳಿಸಿಕೊಡಲಾಗಿದೆ.
ಮತ ಕೇಂದ್ರಕ್ಕೆ ಭದ್ರತೆ
ಶೃಂಗೇರಿ: ಗುರುವಾರ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ ತಾಲೂಕಿನ ಎಲ್ಲಾ ಮತಗಟ್ಟೆಗಳಿಗೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ಒಟ್ಟು 49 ಮತಗಟ್ಟೆಗಳಲ್ಲಿ 21 ಅತಿ ಸೂಕ್ಷ್ಮ, 7 ಸೂಕ್ಷ್ಮ ಹಾಗೂ 21 ಸಾಮಾನ್ಯ ಮತಗಟ್ಟೆಗಳಿದ್ದು, ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿನ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಭಾರಿ ಬಂದೋಬಸ್ತ್ ಒದಗಿಸಲಾಗಿದೆ. ಕೆಎಸ್ಆರ್ಪಿ, ಎಎನ್ಎಫ್, ಡಿಎಆರ್ ಪಡೆಗಳ ಸರ್ಪಗಾವಲು ಹಾಕಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಮತದಾನ ನಡೆಯುವ ಸಲುವಾಗಿ ಬುಧವಾರ ಸಂಜೆಯಿಂದಲೇ ಮುಂಜ್ರಾಗತೆ ಕ್ರಮವಾಗಿ ತೀವ್ರ ನಿಗಾ ಕಟ್ಟೆಚ್ಚರ ವಹಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

