249 ಮತಗಟ್ಟೆ ಮತಯಂತ್ರ ಉಡುಪಿಗೆ
ಕ.ಪ್ರ.ವಾರ್ತೆ, ಕೊಪ್ಪ, ಏ. 18
ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 249 ಮತಗಟ್ಟೆಗಳ ಮತಯಂತ್ರಗಳನ್ನು ಸೂಕ್ತ ಭದ್ರತೆಯೊಂದಿಗೆ ಕೊಪ್ಪ ಪ್ರಥಮ ದರ್ಜೆ ಕಾಲೇಜಿನಿಂದ ಶುಕ್ರವಾರ ಬೆಳಗ್ಗೆ ಉಡುಪಿಗೆ ಸಾಗಿಸಲಾಯಿತು.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತಯಂತ್ರಗಳು ಸೇರಿದಂತೆ ತರೀಕೆರೆ, ಮೂಡಿಗೆರೆ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆ ಮತಯಂತ್ರಗಳನ್ನು ಕೊಪ್ಪ ಮಾರ್ಗವಾಗಿ ಶೃಂಗೇರಿ, ಕೆರೆಕಟ್ಟೆ ಮಾರ್ಗ ಮೂಲಕ ಉಡುಪಿಗೆ ಸಾಗಿಸಲಾಯಿತು.
ಹರಿಹರಪುರ ಮತಗಟ್ಟೆಯ ಅಧಿಕಾರಿ ಕರ್ತವ್ಯ ಲೋಪದಿಂದ ಆದ ಮಾಕ್ಪೋಲ್ ತೊಂದರೆಯನ್ನು ಚುನಾವಣಾ ಆಯೋಗಕ್ಕೆ ಗಮನಕ್ಕೆ ತರಲಾಗಿದೆ.
ಸಂಬಂಧಪಟ್ಟ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಚುನಾವಣಾ ಆಯೋಗ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ವಿಠಲ್ ತಿಳಿಸಿದರು.
ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ ಶಾಂತಿಯುತ ಮತದಾನ ನಡೆದಿದ್ದು, ಕೊಪ್ಪ ತಾಲೂಕಿನ ತೆಂಗಿನಮನೆ ಮತಗಟ್ಟೆ ಹಾಗೂ ಶೃಂಗೇರಿ ತಾಲೂಕು ಹೊನಾವಳ್ಳಿಯ ಮತಗಟ್ಟೆ ಮತಯಂತ್ರ ಕೆಟ್ಟು ಕೆಲ ಾಲ ಮತದಾನ ಸ್ಥಗಿತಗೊಂಡಿತ್ತು.
ತೆಂಗಿನಮನೆ ಮತಗಟ್ಟೆಯಲ್ಲಿ 208 ಮತಗಳು ಚಲಾವಣೆ ನಂತರ ಮತಯಂತ್ರ ಸ್ತಬ್ಧಗೊಂಡು ನಂತರ ಮಂತಯಂತ್ರ ಬದಲಾಯಿಸಲಾಯಿತು.
ಮಧ್ಯಾಹ್ನ 3 ಗಂಟೆ ವೇಳೆಗೆ ನಕ್ಸಲ್ ಪೀಡಿತ ಪ್ರದೇಶದಲ್ಲಿ ಸಿಡಿಲು ಗುಡುಗು ಸಹಿತ ಮಳೆಯಿಂದ ಮತದಾನಕ್ಕೆ ಅಡ್ಡಿಯಾಯಿತು.ಕಿತ್ತಳೆಗುಳಿ ಅತಿಸೂಕ್ಷ್ಮ ಮತಗಟ್ಟೆಯಲ್ಲಿ ಸಿಡಿಲು ಬಡಿದು ಮತಗಟ್ಟೆಯ ವಿಲ್ ಪೋನ್ ನಿಷ್ಕ್ರಿಯಗೊಂಡಿತಲ್ಲದೆ,ಅಂಗನವಾಡಿ ಶಿಕ್ಷಕಿ ಲೀಲಾವತಿ, ವಾಹನ ಚಾಲಕ ಫ್ರಾನ್ಸಿಸ್ ಹಾಗೂ ಭದ್ರತಾ ದಳದ ಸಿಬ್ಬಂದಿಯೊಬ್ಬರಿಗೆ ಸಿಡಿಲು ಬಡಿಯಿತು. ಇದರಿಂದ ಲೀಲಾವತಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದವು.
ತಾಲೂಕಿನ ಕಿತ್ತಲುಗುಳಿಯಲ್ಲಿ ಮತಗಟ್ಟೆಯಲ್ಲಿ 8 ಜನರ ಅರೆಸೈನಿಕ ಪಡೆ ಅತ್ಯಾಧುನಿಕ ಶಸ್ತ್ರಾಸ್ತ್ರದೊಂದಿಗೆ ಕಾವಲು ನಡೆಸಿದ್ದು, ಮತದಾನ ಸಿಬ್ಬಂದಿಗೆ ಜಿಲ್ಲಾಡಳಿತ ಉತ್ತಮ ವ್ಯವಸ್ಥಿತ ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದು ಗಮನ ಸೆಳೆಯಿತು.
ಕೊಪ್ಪ ಪಟ್ಟಣದ ತೋಮರ್ ಶೆಟ್ಟಿ ಮತಗಟ್ಟೆಯನ್ನು ಚುನಾವಣೆ ಆಯೋಗ ಮಾದರಿ ಮತಗಟ್ಟೆಯಾಗಿ ರೂಪಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

