ಅಸಮರ್ಪಕ ವಿದ್ಯುತ್: ಪರದಾಟ
ಶೃಂಗೇರಿ: ತಾಲೂಕಿನಾದ್ಯಂತ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ಮೆಸ್ಕಾಂ ವಿಫಲಗೊಂಡಿದ್ದು ಪದೇ ಪದೇ ವಿದ್ಯುತ್ ಕಡಿತ, ಅಸಮಪರ್ಕ ವಿದ್ಯುತ್ ಪೂರೈಕೆಯಿಂದ ಗ್ರಾಹಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಪಟ್ಚಣ ಸೇರಿದಂತೆ ಗ್ರಾಮೀಣ ಪ್ರದೇಶದ ಹಲವೆಡೆ ಹಗಲು ರಾತ್ರಿ ವಿದ್ಯುತ್ ಕಡಿತಗೊಳಿಸುತ್ತಿರುವದರಿಂದ ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇದುವರೆಗೆ ಲೋಡ್ ಶೆಡಿಂಗ್, ಲೈನ್ ಟ್ರಬಲ್ ಇತ್ಯಾದಿ ಕಾರಣಗಳನ್ನು ಹೇಳುತ್ತಿದ್ದರೆ, ಈಗ ಮಳೆ ಗಾಳಿ, ಗುಡುಗು ಸಿಡಿಲಿನ ನೆಪ. ಒಟ್ಟಾರೆ ವಿದ್ಯುತ್ ಖೋತಾದಿಂದ ಗ್ರಾಹಕರ ಪರದಾಟ.
ಗ್ರಾಮೀಣ ಪ್ರದೇಶಗಳಲ್ಲಿ ಕೆಲವೆಡೆ ಶನಿವಾರ ಬೆಳಿಗ್ಗೆಯಿಂದ ಕಡಿತಗೊಂಡ ವಿದ್ಯುತ್ ಭಾನುವಾರವೂ ಮುಂದುವರಿಯಿತು. ಈ ಬಗ್ಗೆ ಬಾಳೆಹೊನ್ನೂರು ಮೆಸ್ಕಾಂ ವಿಭಾಗ ಕಿರಿಯ ಸಹಾಯಕ ಎಂಜಿನಿಯರ್ ಅವರನ್ನು ಸಂಪರ್ಕಿಸಿದರೆ ಮಳೆ ಗಾಳಿ, ಗುಡುಗಿನ ವೇಳೆಯಲ್ಲಿ ಗ್ರಾಹಕರು ಸಹಕರಿಸಬೇಕು. ಇತರೆ ವೇಳೆಯಲ್ಲಿ ವಿದ್ಯುತ್ ಸ್ಥಗಿತಗೊಂಡರೆ ಸ್ಥಳೀಯ ಲೈನ್ಮನ್ ಅವರನ್ನು ಸಂಪರ್ಕ ಮಾಡಿ ಅವರು ಸ್ಪಂದಿಸದಿದ್ದಾಗ ಬರವಣಿಗೆ ರೂಪದಲ್ಲಿ ನಮ್ಮ ಗಮನಕ್ಕೆ ತನ್ನಿ ಅವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಕಾರಣವಿಲ್ಲದ ಪ್ರತಿಕ್ರಿಯೆ ನೀಡುತ್ತಾರೆ.
ಇನ್ನಾದರೂ ಮೆಸ್ಕಾಂ ಇಲಾಖೆ ಎಚ್ಚೆತ್ತುಕೊಂಡು ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

