ಚಿಕ್ಕಮಗಳೂರು

ಉರುಸ್ ಸಂದಲ್ ಉತ್ಸವ ಇಂದು

Published On :

ನರಸಿಂಹರಾಜಪುರ: ಪ್ರವಾಸಿ ಮಂದಿರದ ಸಮೀಪದ ದರ್ಗಾದಲ್ಲಿ ದರ್ಗಾಯೆ ಹಜ್ರತ್ ಸೈಯದ್ ಹಯಾತ್ 125ನೇ ಉರುಸ್ ಸಂದಲ್ ಉತ್ಸವವು ಏಪ್ರಿಲ್ 28ರ ಸೋಮವಾರ ನಡೆಯಲಿದೆ ಎಂದು ಉರುಸ್ ಸಮಿತಿ ಅಧ್ಯಕ್ಷ ಮುನಾವರ್ ಪಾಷಾ ತಿಳಿಸಿದ್ದಾರೆ.
ಸೋಮವಾರ ಸಂಜೆ 4 ಗಂಟೆಗೆ ಸಂದಲ್ ಉತ್ಸವವು ದರ್ಗಾದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ಎಲ್ಲಾ ದರ್ಗಾಗಳಿಗೂ ತಲುಪಿ ವಾಪಸ್ ಬರಲಿದೆ. ನಂತರ ದರ್ಗಾಕ್ಕೆ ಬಂದ ಮುರ್ಶದ್‌ಗಳಿಂದ ಪೂಜಾ ವಿಧಿ ವಿಧಾನಗಳು ನಡೆಯುತ್ತದೆ.
ಸಂಜೆ ನಡೆಯುವ ಸರ್ವಧರ್ಮ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಎಂ.ಶ್ರೀನಿವಾಸ್, ಶಾಸಕ ಡಿ.ಎನ್. ಜೀವರಾಜ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ ನಡೆಯಲಿದೆ.
ರಾತ್ರಿ 10 ಗಂಟೆಗೆ ಮದ್ರಾಸಿನ ತೌಸಿಫ್ ಖಾದರಿ ಹಾಗೂ ಹೈದರಾಬಾದಿನ ಫಹೀಮ್ ಅವರಿಂದ ಖವಾಲಿ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.