ಚಿಕ್ಕಮಗಳೂರು

ಸಾಮೂಹಿಕ ವಿವಾಹ ಜೂ. 6ರಂದು

Published On :

ಚಿಕ್ಕಮಗಳೂರು: ತಾಲೂಕು ವ್ಯಾಪ್ತಿಯಲ್ಲಿ ವಾಸವಾಗಿರುವ ಆರ್ಥಿಕವಾಗಿ ಹಿಂದುಳಿದಿರುವ ವೀರಶೈವ ಬಾಂಧವರಿಗಾಗಿ ಜೂನ್ 6 ರಂದು ಸರಳ ಸಾಮೂಹಿಕ ವಿವಾಹ ಮತ್ತು ಶಿವದೀಕ್ಷಾ ಸಂಸ್ಕಾರ ವ್ಯವಸ್ಥೆಗೊಳಿಸಿದ್ದು, ವೃತ್ತಿಪರ ಶಿಕ್ಷಣದಲ್ಲಿ ತೊಡಗಿರುವವರಿಗೆ ಪ್ರೋತ್ಸಾಹಧನ ವಿತರಿಸಲಾಗುವುದು ಎಂದು ಜಗದ್ಗುರು ರೇಣುಕಾಚಾರ್ಯ  ಟ್ರಸ್ಟ್ ಉಪಾಧ್ಯಕ್ಷೆ ಗೌರಮ್ಮ ಬಸವೇಗೌಡ ತಿಳಿಸಿದ್ದಾರೆ.
ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ ಅಂಗವಾಗಿ ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಸಾನ್ನಿಧ್ಯದಲ್ಲಿ ಅಂದಿನ ಸಮಾರಂಭ ಆಯೋಜಿಸಲಾಗಿದೆ. ಪೂಜ್ಯರ ಇಷ್ಟಲಿಂಗ ಮಹಾಪೂಜೆ, ಕಲ್ಯಾಣಮಂಟಪದ ಹೊಸ ಮಹಡಿ ಕಟ್ಟಡದ ಉದ್ಘಾಟನೆಯೂ ಅಂದು ಜರುಗಲಿದೆ.
ಪ್ರೋತ್ಸಾಹಧನ: ದ್ವಿತೀಯ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ತಲಾ ರು. 20,000, ಎಂಜಿನಿಯರಿಂಗ್‌ಗೆ ರು. 15,000, ಎಂಸಿಎ ಮತ್ತು ಎಂಬಿಎಗೆ ರು. 10,000 ಹಾಗೂ ಡಿಪ್ಲೊಮೋ ವಿದ್ಯಾರ್ಥಿಗಳಿಗೆ ತಲಾ ರು. 8,000 ಪ್ರೋತ್ಸಾಹಧನ ನೀಡಲಾಗುವುದು.
ಸರಳ ಸಾಮೂಹಿಕ ವಿವಾಹವಾಗುವವರಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕರಿಮಣಿಸರ, ಕಾಲುಂಗರ, ಬಟ್ಟೆ, ಪಾತ್ರೆ ನೀಡಲಾಗುವುದು.
 ಆಸಕ್ತರು ಮೇ 25ರೊಳಗಾಗಿ ಕಲ್ಯಾಣಮಂಟಪದಲ್ಲಿ ಹೆಸರು ನೋಂದಾಯಿಸಬೇಕು ಎಂದು  ಗೌರಮ್ಮ ಬಸವೇಗೌಡ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.