ಚಿಕ್ಕಮಗಳೂರು

ಹೆಬ್ಬೆ ಬಳಿ ಒಂಟಿ ಸಲಗ ಪತ್ತೆ

Published On :

ನರಸಿಂಹರಾಜಪುರ:  ದಟ್ಟಾರಣ್ಯದಲ್ಲಿರುವ ಹೆಬ್ಬೆ ದೇವಸ್ಥಾನದ ಪಕ್ಕದಲ್ಲಿ ಒಂದೇ ದಂತ ಹೊಂದಿರುವ ಒಂಟಿ ಕಾಡಾನೆಯೊಂದು ಕಳೆದ 4 ದಿನದಿಂದ ಸುತ್ತಾಡುತ್ತಿದೆ.
ಭದ್ರಾ ಹಿನ್ನೀರಿನ ಪಕ್ಕದ ಭದ್ರಾ ಅಭಯಾರಣ್ಯದಲ್ಲಿ ಭವಾನಿ ಶಂಕರೇಶ್ವರ ಸ್ವಾಮಿಯ ದೇವಾಲಯವಿದೆ. ಕಳೆದ ಶನಿವಾರ ಇಲ್ಲಿ ರಥೋತ್ಸವ ನಡೆದಿದೆ. ಸೋಮವಾರ ರುದ್ರಹೋಮ ನಡೆದಿದ್ದು, ಆ ಸಮಯಲ್ಲಿ ಒಂಟಿ ಆನೆ ಸುತ್ತಾಡುತ್ತಿರುವುದು ಅರ್ಚಕ ಚಂದ್ರಶೇಖರ ಐತಾಳ್ ಗಮನಕ್ಕೆ ಬಂದಿದೆ. ಈ ಸಂದರ್ಭ ಅರ್ಚಕರ ಜೊತೆಯಲ್ಲಿ ಹೆಬ್ಬೆಯ ದೇವಸ್ಥಾನಕ್ಕೆ ಬಂದಿದ್ದ ಯುವಕ ನರಸಿಂಹರಾಜಪುರದ ಎನ್.ನವೀನ್ ಕ್ಯಾಮರಾದಲ್ಲಿ ಪೋಟೋ ತೆಗೆದಿರುವುದು ಇಲ್ಲಿ ಒಂಟಿ ದಂತದ ಆನೆಯ ಸುತ್ತಾಡುತ್ತಿರುವುದು ದೃಢಪಟ್ಟಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.