ಚಿಕ್ಕಮಗಳೂರು

ಜಾತ್ರೋತ್ಸವ: ಪಾನಕ ವಿತರಣೆ

Published On :

ಕ.ಪ್ರ.ವಾರ್ತೆ, ಕಡೂರು, ಫೆ.6
ಪಟ್ಟಣದಲ್ಲಿ ಶ್ರೀಅಂತರಘಟ್ಟಮ್ಮನ ಜಾತ್ಸೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದೊಡ್ಡಪೇಟೆ, ಹಳೇಪೇಟೆ, ಸುಭಾಷ್ ನಗರ ಸೇರಿದಂತೆ ಎಲ್ಲೆಡೆ ಜನರು ಸಂಭ್ರಮದಿಂದ ಉತ್ಸವ ಆಚರಿಸಿದರು.
ರೈತರು ಗಾಡಿ, ಇನ್ನಿತರ ವಾಹನಗಳನ್ನು ಸಿಂಗರಿಸಿಕೊಂಡು ಆಗಮಿಸಿದ್ದರು ಎತ್ತಿನ ಬಂಡಿ, ಎನ್ನುಗಳನ್ನು ಅಲಂಕರಿಸಿದ್ದರು. ನೂರಾರು ಪಾನಕ ಗಾಡಿಗಳು ಪಟ್ಟಣದಾದ್ಯಂತ ಮೆರವಣಿಗೆ ನಡೆಸಿದ್ದು ವಿಶೇಷವಾಗಿತ್ತು.
ಸಂಜೆ 5.30 ಗಂಟೆಗೆ ಪಟ್ಟಣದ ಹಳೇಪೇಟೆಯ ದೇವಾಲಯದಿಂದ ಪಾನಕದ ಗಾಡಿಗೆ ಚಾಲನೆ ನೀಡಲಾಯಿತು. ಜೈನ್ ಟೆಂಪಲ್ ರಸ್ತೆಯಿಂದ ಗಾಡಿಗಳು ಸಾಗಿದವು. ದೊಡ್ಡಪೇಟೆಯ ಶ್ರೀಲಕ್ಷ್ಮೀದೇವಿ ದೇವಾಲಯದಿಂದಲೂ ಪಾನಕದ ಗಾಡಿಗಳನ್ನು ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆಯೊಂದಿಗೆ ಕರೆ ತರಲಾಯಿತು.
ಪಾನಕದ ಗಾಡಿಗೆ ಶಾಸಕ ವೈ.ಎಸ್.ವಿ. ದತ್ತ  ಚಾಲನೆ ನೀಡಿದರು. ಮೆರವಣಿಗೆ ಉಸ್ತುವಾರಿ ಪುರಸಭಾ ಸದಸ್ಯ ತೋಟದಮನೆ ಮೋಹನ್ ವಹಿಸಿದ್ದರು. ವಿವಿಧ ಕಲಾ ತಂಡಗಳೊಂದಿಗೆ ಮರವಂಜಿ ವೃತ್ತ, ಕೆಎಲ್‌ವಿ ವೃತ್ತ ಮತ್ತು ಪೇಟೆ ಗಣಪತಿ ಆಂಜನೇಯಸ್ವಾಮಿ ದೇವಾಲಯದ ಮುಖಾಂತರ ಛತ್ರದ ಬೀದಿಗೆ ತೆರಳಿದ ಪಾನಕದ ಗಾಡಿಗಳು ಗ್ರಾಮದೇವತೆ ಕೆಂಚಾಂಬದೇವಿ ಅಮ್ಮನವರ ದೇಗುಲ ಸುತ್ತುವರೆದು ಅಂತರಘಟ್ಟಮ್ಮನ ಹೆಸರಿನಲ್ಲಿ ಭಕ್ತರಿಗೆ ಪಾನಕ ಹಂಚಿದರು.
ಪುರಸಭಾ ಸದಸ್ಯ ಎಂ.ಸೋಮಶೇಖರ್, ಮಂಜುನಾಥ್, ಹೋಬಳದಾರ ತಮ್ಮಯ್ಯ, ವೆಂಕಟೇಶ್, ಆಟೋ ಚಂದ್ರು, ರಾಜು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.