ಚಿಕ್ಕಮಗಳೂರು

18ರಂದು ಶಾರದಾ ಮಹಾರಥೋತ್ಸವ

Published On :

ಶೃಂಗೇರಿ: ಇಲ್ಲಿನ ಶಾರದಾ ಪೀಠದ ಅಧಿದೇವತೆ ಶಾರದಾಂಬೆಯ ಮಹಾರಥೋತ್ಸವ ಫೆ. 18 ರಂದು ನಡೆಯಲಿದೆ. ರಥೋತ್ಸವದ ಅಂಗವಾಗಿ 14 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. 14 ರಂದು ಶಕ್ತಿಗಣಪತಿ ಸನ್ನಿಧಿಯಲ್ಲಿ ಗಣಪತಿ ಪೂಜೆ, 15 ರಂದು ಶಾರದಾಂಬಾ ದೇಗುಲದಲ್ಲಿ ಧ್ವಜಾರೋಹಣ, ಪ್ರವಚನ ಮಂದಿರದಲ್ಲಿ ಶ್ರೀಗಳವರ ಸಮ್ಮುಖದಲ್ಲಿ ಶತಚಂಡೀಮಹಾಯಾಗದ ಸಂಕಲ್ಪ, ಚಂಡೀಪುರಶ್ಚರಣೆ, 16 ರಂದು ರಥೋತ್ಸವಾಂಗ ಹೋಮಗಳು, ಚಂಡೀ ಪುರಶ್ಚರಣೆ, ಬ್ರಹ್ಮಸಂತರ್ಪಣೆ, ಸಂಜೆ ಬೀದಿ ಉತ್ಸವ,17 ರಂದು ಶ್ರೀ ಗಳವರಿಂದ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ನೆರವೇರಲಿದೆ. 18 ರಂದು ಬೆಳಗ್ಗೆ 10 ಗಂಟೆಗೆ ಶ್ರೀಗಳವರ ಸಾನ್ನಿಧ್ಯದಲ್ಲಿ ರಥಬೀದಿಯಲ್ಲಿ ಶಾರದಾಂಬಾ ಮಹಾರಥೋತ್ಸವ ಜರುಗಲಿದೆ. 19 ರಂದು ಶತಚಂಡೀ ಮಹಾಯಾಗದ ಪೂರ್ಣಾಹುತಿ, ರಥೋತ್ಸವಾಂಗ ಅವಭೃತ, ಸಂಜೆ ತುಂಗಾ ನದಿಯಲ್ಲಿ ತೆಪ್ಪೋತ್ಸವ ನಂತರ ಬೀದಿ ಉತ್ಸವ ನಡೆಯಲಿದೆ.
15 ರಿಂದ ಹಾಡುಹಬ್ಬ
ಶೃಂಗೇರಿ: ಬೆಂಗಳೂರಿನ ಉಪಾಸನಾ ಟ್ರಸ್ಟ್, ನಿರ್ಮಾಣ ಶೆಲ್ಟರ್ಸ್, ಕೊಪ್ಪ, ಶೃಂಗೇರಿಯ ನಾದಬ್ರಹ್ಮ ಸಂಗೀತ ಮತ್ತು ನೃತ್ಯ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಫೆ. 15 ಹಾಗೂ 16 ರಂದು ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಹಾಡುಹಬ್ಬ ಎರಡು ದಿನಗಳ ಗೀತ ಹಾಗೂ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಫೆ. 15 ರ ಶನಿವಾರ ಬೆಳಗ್ಗೆ 10 ಗಂಟೆಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಮಠದ ಆಡಳಿತಾಧಿಕಾರಿ ಡಾ.ವಿ.ಆರ್. ಗೌರೀಶಂಕರ್, ಹಿರಿಯ ಸುಗಮ ಸಂಗೀತ ಗಾಯಕಿ ಡಾ.ಬಿ.ಕೆ. ಸುಮಿತ್ರ, ಹಿರಿಯ ಗಾಯಕ ಗರ್ತಿಕೆರೆ ರಾಘಣ್ಣ ಮೊದಲಾದರು ಪಾಲ್ಗೊಳ್ಳಲಿದ್ದಾರೆ.
ನಂತರ ಕವಿತಗಾಯನ, ಸಮೂಹ ನೃತ್ಯ, ಶೃಂಗೇರಿಯ ಗಾನ ಕುಸುಮಗಳು, ಸಂಜೆ ಪ್ರಸಿದ್ಧ ಕಲಾವಿದರಿಂದ ಕವಿತಾಗಾಯನ ನಡೆಯಲಿದೆ. ಫೆ. 16ರ ಭಾನುವಾರ ಸಮೂಹ ಗಾಯನ, ನಿರಂತರ ಕವಿತಾಯಾನ, ಮಧ್ಯಾಹ್ನ ನಾಡಿನ ಪ್ರಸಿದ್ಧ ಕವಿಗಳಿಂದ ಕವಿಗೋಷ್ಠಿ ಹಾಗೂ ಪ್ರಸಿದ್ಧ ಗಾಯಕರಿಂದ ಗೀತಗಾಯನ, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ನಂತರ ಸಂಜೆ ಗೀತಗಾಯನ ಕಾರ್ಯಕ್ರಮ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.