ಚಿಕ್ಕಮಗಳೂರು

ಸಭೆಗೆ ತಹಸೀಲ್ದಾರ್ ಗೈರು

Published On :

ಕ.ಪ್ರ.ವಾರ್ತೆ, ಕೊಪ್ಪ, ಜ. 6 ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಗೆ ತಹಸೀಲ್ದಾರ್ ಹಾಜರಾಗದೇ ಇರುವುದರಿಂದ ಕಂದಾಯ ಇಲಾಖೆಯ ಸೂಕ್ತ ಮಾಹಿತಿ ಸಭೆ ಲಭ್ಯವಾಗದ ಕಾರಣ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಅಡ್ಡಿ ಉಂಟಾಗುತ್ತಿದೆ ಎಂದು ತಾಪಂ ಅಧ್ಯಕ್ಷರಾದ ಪದ್ಮವತಿ ರಮೇಶ್  ಆಕ್ಷೇಪ ವ್ಯಕ್ತಪಡಿಸಿದರು.
ಸೋಮವಾರ ನಡೆದ ತಾಪಂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸತತವಾಗಿ ತಹಸೀಲ್ದಾರ್ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗದೇ ಅವರು ಕಳುಹಿಸುತ್ತಿರುವ ಇಲಾಖೆ  ಸಿಬ್ಬಂದಿಯಿಂದ ಸೂಕ್ತಮಾಹಿತಿ ಲಭ್ಯವಾಗುತ್ತಿಲ್ಲ ಎಂದರು.
ಕರೆದರೂ ಬಾರರು: ಲೇಔಟ್ ನಿರ್ಮಾಣಕ್ಕೆ, ನಿವೇಶನ ಹಚಿಂಕೆ, ಅಂಗವಿಕಲ, ಸಂಧ್ಯಾ ಸುರಕ್ಷಾ ಯೋಜನೆಯಂತಹವುಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಅಡ್ಡಿಯಾಗುತ್ತಿದೆ. ಇದ್ದುದರಿಂದ ಸಭೆಯ ಅಧ್ಯಕ್ಷರು ಸೇರಿದಂತೆ ಸ್ಥಾಯಿ ಸಮಿತಿ ಅಧ್ಯಕ್ಷ ನಾರಯಾಣ್, ಉಪಾಧ್ಯಕ್ಷ ಪೂರ್ಣಚಂದ್ರ ಆಕ್ಷೇಪ ವ್ಯಕ್ತಪಡಿಸಿದರು.
ಪೂರ್ಣ ಮಾಹಿತಿ ಇಲ್ಲದೇ ಅರಣ್ಯ ಇಲಾಖೆ ಅಧಿಕಾರಿಗಳು  ಏಕಾಏಕಿ ಗಿರಿಜನರ ಸಾಗುವಳಿ ಭೂಮಿಗೆ  ಹೋಗಿ ಅವರು ನೆಟ್ಟ ಗಿಡಗಳನ್ನು ಕಿತ್ತು, ಚರಂಡಿ ನಿರ್ಮಾಣಕ್ಕೆ ಮುಂದಾಗುವುದು ನಂತರ ನಾಯಕರ ಪೋನ್ ಮಾಡಿ ಅದು ಅರಣ್ಯ ಹಕ್ಕು ಸಮಿತಿಯಲ್ಲಿ ಅರ್ಜಿ ಕೊಟ್ಟ ಜಮೀನು ಎಂದ ಕೂಡಲೇ ಬಿಟ್ಟು ಬರುವ  ನಾಟಕೀಯ ಬೆಳವಣಿ ಅರಣ್ಯ ಇಲಾಖೆಯಿಂದ ನಡೆಯುತ್ತಿದೆ.  ಇಂತಹ ಕೆಲಸ ಯಾರನ್ನು ಮೆಚ್ಚಿಸಲು ಅರಣ್ಯ ಅಧಿಕಾರಿಗಳು ಮಾಡುತ್ತಿದ್ದಿರೀ ಎಂದು ತಿಳಿಯುತ್ತಿಲ್ಲ ಎಂದರು.
ಸಭೆಯಲ್ಲಿ  ಜಿಪಂ ಸದಸ್ಯೆ ಅನ್ನಪೂರ್ಣ ಚನ್ನಕೇಶವ, ತಾಪಂ ಸದಸ್ಯರಾದ ಸುಜಾತಾ, ಲಲಿತಾ ಹಾಗೂ ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಿ. ತಿಪ್ಪೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.