'ಅಂಧರಿಗೆ ಕೀಳರಿಮೆ ಬೇಡ'
ಕ.ಪ್ರ. ವಾರ್ತೆ ಚಿಕ್ಕಮಗಳೂರು ಜ.6
ಬ್ರೈಲ್ ಲಿಪಿಯ ಜನಕ ಲೂಯಿ ಬ್ರೈಲ್ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗುವ ಮೂಲಕ ಅಂಧರು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಹೇಳಿದ್ದಾರೆ.
ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಇತ್ತೀಚೆಗೆ ನಡೆದ ಬ್ರೈಲ್ ಲಿಪಿಯ ಜನಕ ಲೂಯಿ ಬ್ರೈಲ್ ಅವರ 205ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಡತನದಲ್ಲೇ ಹುಟ್ಟಿ ಬೆಳೆದ ಲೂಯಿ ಬ್ರೈಲ್ ಅವರು ಐದನೇ ವಯಸ್ಸಿನಲ್ಲೇ ತಮ್ಮ ಎರಡೂ ಕಣ್ಣು ಕಳೆದುಕೊಂಡರೂ ಧೃತಿಗೆಡದೆ ಸಾಧನೆಯ ಮೂಲಕ ಬಾನೆತ್ತರಕ್ಕೆ ಬೆಳೆದು ನಿಂತವರು. ಬ್ರೈಲ್ ಲಿಪಿ ಕಂಡು ಹಿಡಿಯುವ ಮೂಲಕ ಅಂಧರ ಬದುಕಿಗೆ ಊರುಗೋಲಾದವರು ಎಂದರು.
ಅಂಧಮಕ್ಕಳು ಕೀಳರಿಮೆ ಬಿಡಬೇಕು. ಲೂಯಿ ಬ್ರೈಲ್ ಅವರ ಬದುಕು ಮತ್ತು ಸಾಧನೆ ಅರಿಯಬೇಕು. ಅವರ ಸಂದೇಶಗಳಿಂದ ಪ್ರೇರಣೆ ಪಡೆದು ಆತ್ಮವಿಶ್ವಾಸ ಮತ್ತು ಛಲದಿಂದ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಬಿಡಿಆರ್ ಕಾಲೇಜಿನ ಉಪನ್ಯಾಸಕ ಶಿವಕುಮಾರ್ ಮಾತನಾಡಿ, ಲೂಯಿ ಬ್ರೈಲ್ ಅವರ ಸಾಧನೆಯ ಹಾದಿಯಲ್ಲಿ ಅಂಧರು ಸಾಗಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.
ಜನ್ಮದಿನಾಚರಣೆ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಲೂಯಿ ಬ್ರೈಲ್ ಅವರ ಬದುಕು ಕುರಿತ ನಾಟಕ ವಿದ್ಯಾರ್ಥಿಗಳಿಂದ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

