55 ಲಕ್ಷದ ನೀರು ಯೋಜನೆ
ಬೀರೂರು: ಇಲ್ಲಿಗೆ ಸಮೀಪದ ಹೊಗರೇಹಳ್ಳಿಯಲ್ಲಿ ಹೊಗರೇಖಾನ್ ಗಿರಿ ಮೇಲಿನ ಕುಡಿಯುವ ನೀರಿನ ಜರಿ ಕಾಮಗಾರಿ ಕುರಿತು ಅಧಿಕಾರಿಗಳೊಂದಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಳರು ಮಂಗಳವಾರ ಚರ್ಚಿಸಿದರು.
ರಂಗನಾಥಸ್ವಾಮಿ ಸಮುದಾಯಭವನದಲ್ಲಿ ನಡೆದ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಈ ಕುರಿತು ಸರ್ವೆ ನಡೆಸಿ ಕ್ರಮ ಕೈಗೊಂಡಲ್ಲಿ ರೈತರಿಗೆ ಅನುಕೂಲವಾಗಲಿದೆ. 55 ಲಕ್ಷ ರು. ವೆಚ್ಚದ ಈ ಯೋಜನೆ ಬೇಗ ಕಾರ್ಯಗತಗೊಂಡು ಸಮರ್ಪಕ ಕುಡಿಯುವ ನೀರು ಪೂರೈಕೆಯಾಗಲಿ ಎಂದು ಅವರು ಹೇಳಿದರು.
ಎಮ್ಮೇದೊಡ್ಡಿ ವಿವಾದ: ಎಮ್ಮೇದೊಡ್ಡಿ ಭಾಗದ ಸಣ್ಣ ಹಿಡುವಳಿದಾರರ ಸಮಸ್ಯೆ ಹಾಗು ಅರಣ್ಯ ಇಲಾಖೆ ನಡುವೆ ಉಂಟಾಗಿರುವ ಸಮಸ್ಯೆ ಕುರಿತು ಜಿಲ್ಲಾ ಅರಣ್ಯಧಿಕಾರಿಗಳೊಂದಿಗೆ ಚರ್ಚಿಸಿದ್ದು ರೈತರಿಗೆ ಅನ್ಯಾಯವಾಗದಂತೆ ಸಮಸ್ಯೆ ಪರಿಹರಿಸಿಕೊಳ್ಳುವ ಕುರಿತು ಸಕಾರಾತ್ಮಕವಾಗಿ ಸ್ಪಂದಿಸುವಂತೆ ಮನವಿ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕ್ಷೇತ್ರದ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಈ ಭಾಗಕ್ಕೆ ಸಮರ್ಪಕ ಕುಡಿಯುವ ನೀರು ಹಾಗು ಎಮ್ಮೇದೊಡ್ಡಿ ಭಾಗದ ರೈತರ ಸಮಸ್ಯೆ ಕುರಿತಂತೆ ಮಾಜಿ ಪ್ರಧಾನಿಗಳಿಂದಲೇ ಖುದ್ದು ಸ್ಥಳ ಪರಿಶೀಲನೆ ನಡೆದಿದೆ. ಈ ಭಾಗದ ರೈತರ ಆತಂಕ ನಿವಾರಿಸುವಲ್ಲಿ ಇಂದಿನ ಕಾರ್ಯಕ್ರಮ ಅರಣ್ಯಧಿಕಾರಿಗಳೊಂದಿಗೆ ಚರ್ಚಿಸಿದ್ದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಪ.ಸದಸ್ಯ ಜಿ.ಪಿ.ನಾಗರಾಜ್, ಪಾಪಣ್ಣ, ತಹಸೀಲ್ದಾರ್, ಡಿಎಫ್ ಒ ರವಿನಾರಾಯಣ್, ಪಕ್ಷದ ತಾಲೂಕು ಅಧ್ಯಕ್ಷ ಕೆ.ಎಂ.ಮಹೇಶ್ವರಪ್ಪ, ಪುರಸಭೆ ಸದಸ್ಯೆ ವಸಂತ ರಮೇಶ್, ರಂಗನಾಥ್, ನಾಗಭೂಷಣ್, ತಿಮ್ಮೇಗೌಡ, ಲಕ್ಷ್ಮೀಕಾಂತ್, ಲೋಕೇಶ್, ಜಿ.ಪ. ಎಇಇ ಪ್ರಭಾಕರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

