ಚಿಕ್ಕಮಗಳೂರು

ಪ್ರಚಾರಕ್ಕಾಗಿ ಆರೋಪ: ಟೀಕೆ

Published On :

ಚಿಕ್ಕಮಗಳೂರು: ದರ್ಗಾ ಅಪವಿತ್ರಗೊಳಿಸಿರುವ ಸಂಬಂಧ ಬಿಜೆಪಿ ಮೇಲೆ ಆರೋಪ ಮಾಡುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ. ಪತ್ರಿಕೆಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಶಾಸಕರ ಮೇಲೆ ಎಚ್.ಎಚ್. ದೇವರಾಜ್ ಅವರು ಇಲ್ಲದ ಸಲ್ಲದ ಆರೋಪ ಮಾಡುತ್ತಿದ್ದು, ಬಿಜೆಪಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಅವರಿಗಿಲ್ಲ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ. ದರ್ಗಾವೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ. ರವಿ ಅವರ ಹೆಸರನ್ನು ತರುವುದು ದುರದೃಷ್ಟಕರ. ಅಪವಿತ್ರಗೊಳಿಸಿದ ಕಿಡಿಕೇಡಿಗಳು ಯಾರೆಂಬುದು ಜೆಡಿಎಸ್ ಮತ್ತು ಕಾಂಗ್ರೆಸ್ಸಿಗರಿಗೆ ತಿಳಿದಿರುವ ವಿಷಯ. ಈ ಪ್ರಕರಣದಲ್ಲಿ ಯಾವ ಯಾವ ಪಕ್ಷದ ಮುಖಂಡರ ಕೈವಾಡ ಇದೆ ಎಂಬುದನ್ನು ಈಗಾಗಲೇ ಜನತೆಗೆ ತಿಳಿದಿದೆ ಎಂದು ಹೇಳಿದ್ದಾರೆ.
ಧನ್ಯಶ್ರೀ ಪ್ರಥಮ
ತರೀಕೆರೆ: ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತರೀಕೆರೆ ಅರುಣೋದಯ ವಿದ್ಯಾ ಕೇಂದ್ರ ಹಾಗೂ ಪ್ರಕೃತಿ ಶ್ರೀ ಕಲಾ ಕುಟೀರದ ಸಂಗೀತ ವಿದ್ಯಾರ್ಥಿನಿಯಾದ ಟಿ.ಎಸ್. ಧನ್ಯಶ್ರೀ ಅವರು ಅಂಗ್ಲ ಕಂಠಪಾಠದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಪ್ರಕೃತಿ ಶ್ರೀ ಕಲಾ ಕುಟೀರದ ಮುಖ್ಯಸ್ಥೆ ಉಮಾಪ್ರಕಾಶ್ ಮತ್ತು ವಿದ್ಯಾರ್ಥಿಗಳು ಟಿ.ಎಸ್.ಧನ್ಯಶ್ರೀ ಅವರನ್ನು ಅಭಿನಂದಿಸಿದ್ದಾರೆ.
ಸಂಭ್ರಮದಿಂದ ಸಂಕ್ರಾತಿ ಆಚರಣೆ
ಶೃಂಗೇರಿ: ಪಟ್ಟಣದಲ್ಲಿ ಮಂಗಳವಾರ ಸಂಕ್ರಾತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಜನರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಜನರು ಹಬ್ಬವನ್ನು ಮನೆಮನೆಗಳಲ್ಲಿ ಆಚರಿಸಿದರು. ಈದ್ ಮಿಲಾದ್ ಹಾಗೂ ಸಂಕ್ರಾತಿ ಹಬ್ಬ ಒಂದೇ ದಿನ ಆಚರಿಸುತ್ತಿದ್ದುದು ಸೌಹಾರ್ಧತೆಗೆ ಸಾಕ್ಷಿಯಾಗಿತ್ತು.
ಈದ್ ಮಿಲಾದ್
ಶೃಂಗೇರಿ: ಪಟ್ಟಣದಲ್ಲಿ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು. ಮಿಲಾಧುನ್ನಬಿ ಅಂಗವಾಗಿ ಮಸೀದಿಯಲ್ಲಿ ವಿಶೇಷ ಧಾರ್ಮಿಕ ಉಪನ್ಯಾಸ, ಕಾರ್ಯಕ್ರಮಗಳು ನಡೆಯಿತು.ಅಲ್ ಬದ್ರಿಯಾ ಮಸೀದಿಯಲ್ಲಿ ಕಳೆದ ಮೂರು ದಿನಗಳಿಂದ ಮಿಲಾದುನ್ನಬಿ ಅಂಗವಾಗಿ ವಿಶೇಷ ಉಪನ್ಯಾಸ, ಧಾರ್ಮಿಕ ಕಾರ್ಯಕ್ರಮಗಳು, ಮಕ್ಕಳ ಕಾರ್ಯಕ್ರಮಗಳು ನಡೆದವು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.