ನಾಳೆ ಪುಸ್ತಕ ಬಿಡುಗಡೆ
ಸಾಗರ: ಇಲ್ಲಿನ ಮಲೆನಾಡು ಗಮಕ ಕಲಾಸಂಘ ಜ. 18ರಂದು ಸಮಗ್ರ ಕನ್ನಡ ಗಮಕವಾಹಿನಿ ಪುಸ್ತಕ ಬಿಡುಗಡೆ ಹಾಗೂ ಜ. 19ರಂದು ಹಗಲಿಡೀ ಗಮಕಧಾರೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಜ.18ರಂದು ಸಂಜೆ 5-30ಕ್ಕೆ ಪಟ್ಟಣದ ಶೃಂಗೇರಿ ಶಂಕರಮಠದ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೆ.ಆರ್. ಕೃಷ್ಣಯ್ಯ ಬರೆದಿರುವ ಕುಮಾರವ್ಯಾಸ ಭಾರತದ ಆರು ಪ್ರಸಂಗಗಳ ಪಚ್ಚೆತೆನೆ ಗ್ರಂಥವನ್ನು ಸಾಹಿತಿ ಡಾ.ನಾ. ಡಿಸೋಜ ಬಿಡುಗಡೆ ಮಾಡಲಿದ್ದಾರೆ. ನ್ಯಾಯವಾದಿ ಟಿ.ಬಿ. ಮಂಜುನಾಥ ಶೆಟ್ಟಿ, ಪ್ರೊ. ತಿರುಮಲ ಮಾವಿನಕುಳಿ ಭಾಗವಹಿಸಲಿದ್ದು, ಪುಸ್ತಕದ ಕುರಿತು ಉಪನ್ಯಾಸಕ ಜಿ. ಯೋಗೀಶ್ ಮಾತನಾಡಲಿದ್ದಾರೆ. ಜ. 19ರಂದು ಹಗಲಿಡೀ ಗಮಕ ಕಾರ್ಯಕ್ರಮ ನಡೆಯಲಿದ್ದು ಬೆಳಗ್ಗೆ 9-30ಕ್ಕೆ ಚಂದನವಾಹಿನಿಯ 2013ರ ಗಮಕ ಪ್ರಶಸ್ತಿ ಪುರಸ್ಕೃತ ಹೊಸಬಾಳೆ ಸೀತಾರಾಮರಾವ್ ಉದ್ಘಾಟಿಸಲಿದ್ದಾರೆ. ಶಂಕರಮಠದ ಧರ್ಮಾಧಿಕಾರಿ ಎಸ್.ಆರ್. ತಿಮ್ಮಪ್ಪ ಪಾಲ್ಗೊಳ್ಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಪ್ರೊ.ಕೆ.ಆರ್. ಕೃಷ್ಣಯ್ಯ ಮನವಿ ಮಾಡಿದರು. ಸಂಘದ ಪ್ರಭಾವತಿ, ರವೀಂದ್ರ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

