ಚಿಕ್ಕಮಗಳೂರು

ನಮಗೂ ಪ್ರವೇಶ ನೀಡಿ

Published On :

ಚನ್ನಗಿರಿ: ಪಟ್ಟಣದಲ್ಲಿರುವ ಪಾರ್ಶ್ವನಾಥ ವಿದ್ಯಾಲಯದಲ್ಲಿ ಬಿಇಡಿ ತರಗತಿಗಳಿಗೆ ನೋಂದಣಿಯಾದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಚಿತ್ರದುರ್ಗದ ಧರಣಿ ಸಂಸ್ಥೆಯ ಕಾರ್ಯದರ್ಶಿ ರಮಾ ನಾಗರಾಜ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಎದುರು ಮಂಗಳವಾರ ಮುಷ್ಕರ ನಡೆಸಿದರು.
ಮಾನ್ಯತೆ ಇಲ್ಲದ ಸಂಸ್ಥೆ ಇದಾಗಿದ್ದು, ಇಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ವರ್ಗಾಯಿಸಬೇಕು. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹುಡುಗಾಟ ಆಡಬಾರದು ಎಂದು ಆರೋಪಿಸಿದರು. ಇದು ಸರಿಯಾಗುವವರೆಗೂ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.
ವಿನಾಕಾರಣ ಆರೋಪ: ಈ ಬಗ್ಗೆ ಪಾರ್ಶ್ವನಾಥ ವಿದ್ಯಾಲಯದ ಆಡಳಿತಾಧಿಕಾರಿ ಶಶಿಕಲಾ ಪಾರಸ್ ಜೈನ್ ಪ್ರತಿಕ್ರಿಯೆ ನೀಡಿ, ಈ ಸಂಸೆ ಸರ್ಕಾರದಿಂದ ಮಾನ್ಯತೆ ಪಡೆದು ಕಳೆದ ಹಲವು ವರ್ಷಗಳಿಂದಲೂ ಬಿಇಡಿ ತರಗತಿಗಳನ್ನು ನಡೆಸಿಕೊಳ್ಳುತ್ತಾ ಬರುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉದ್ಯೋಗದಲ್ಲಿದ್ದಾರೆ. ವಿನಾಕಾರಣ ಸಂಸ್ಥೆಯ ಮೇಲೆ ಇಲ್ಲ-ಸಲ್ಲದ ಆರೋಪ ಮಾಡುವುದು ತರವಲ್ಲ ಎಂದು ಸರ್ಕಾರ ಅನುಮತಿ ನೀಡಿದ ದಾಖಲಾತಿಗಳನ್ನು ಪ್ರದರ್ಶಿಸಿದರು.
ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಚಿತ್ರದುರ್ಗದ ಇಬ್ಬರು ವ್ಯಕ್ತಿಗಳಿಗೆ ಯಾವುದೇ ಕರಾರುಗಳನ್ನು ಮಾಡಿಕೊಳ್ಳದೇ  ಸಂಸ್ಥೆಯನ್ನು ನಡೆಸಲು ಮೌಖಿಕವಾದ ಮಾತು-ಕತೆಗಳ ಮೂಲಕ ಮಾತು-ಕತೆ ನಡೆದಿತ್ತು, ಅವರಿಗೂ ನಮಗೂ ಷರತ್ತುಗಳ ವಿಚಾರದಲ್ಲಿ ಹೊಂದಾಣಿಕೆಯಾಗದ ಕಾರಣ ಈ ನಮ್ಮ ಸಂಸ್ಥೆಯವರೇ ಕಾಲೇಜನ್ನು ನಡೆಸಲು ನಿರ್ಧರಿಸಿ ವಿದ್ಯಾರ್ಥಿಗಳ ನೋಂದಣಿ ಆಂರಭಿಸಿದಾಗ ಮುಷ್ಕರ ನಡೆಸುತ್ತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.