ಸಂಬಂಧ ಬೆಳೆಯಲು ಸೌಹಾರ್ದ ಅಗತ್ಯ
ನರಸಿಂಹರಾಜಪುರ: ಪರಸ್ಪರ ಸೌಹಾರ್ದದಿಂದ ಮಾನವೀಯ ಸಂಬಂಧ ಬೆಳೆಯಲು ಸಹಕಾರಿಗುತ್ತದೆ ಎಂದು ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆ ಶಿಕ್ಷಕ ಕೆ. ಗಣಪತಿ ತಂತ್ರಿ ತಿಳಿಸಿದರು.
ಇಲ್ಲಿನ ರಾಘವೇಂದ್ರ ಬಡಾವಣೆಯಲ್ಲಿ ಇತ್ತೀಚೆಗೆ ನಡೆದ ನಿವಾಸಿ ಅಸೋಸಿಯೇಶನ್ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ, ನಾವು ಬೇರೆಯವರಿಂದ ಏನನ್ನು ಬಯಸುತ್ತೇವೆಯೋ ನಾವು ಸಹ ಅವರಿಗೆ ಅದನ್ನೇ ನೀಡುವವರಾಗಬೇಕು. ತನ್ನಂತೆ ಬೇರೆಯವರು ಎಂದು ಪರಿಗಣಿಸಬೇಕು ಎಂದವರು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಪಪಂ ಸದಸ್ಯ ಅಂಜುಮ್, ಬಡಾವಣೆಯ ನಿವಾಸಿಗಳು ಪರಸ್ಪರ ಬಾಂಧವ್ಯ ಬೆಳೆಸಿಕೊಂಡು ಹೋಗಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಪಂ ಅಧ್ಯಕ್ಷೆ ಲೇಖಾವಸಂತ್, ಪ್ರತಿಯೊಬ್ಬರ ಸಮಸ್ಯೆ ಬಗೆಹರಿಸಲು ಪಪಂ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು. ಅಧ್ಯಕ್ಷತೆಯನ್ನು ರಾಘವೇಂದ್ರ ಬಡಾವಣೆ ನಿವಾಸಿ ಗುಣಪಾಲ್ ನಲ್ವಹಿಸಿದ್ದರು.
ಅಸೋಸಿಯೇಶನ್ ಗೌರವ ಅಧ್ಯಕ್ಷ ಸುಂದರೇಶ್, ಕಾರ್ಯದರ್ಶಿ ನಿರಂಜನ್, ಎಂ.ಆರ್. ರವಿಶಂಕರ್, ಶೀಲಾ ಸುಂದರೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

