ಚಿಕ್ಕಮಗಳೂರು

ಕುಡಿವ ನೀರು: ಇಂದು ಚರ್ಚೆ

Published On :

ತರೀಕೆರೆ:  ಕುಡಿಯುವ ನೀರು ಹಾಗೂ ಇತರ ಕಾಮಗಾರಿ ಬಗ್ಗೆ ಚರ್ಚಿಸಲು ಜೂ.18ರಂದು ಪಟ್ಟಣದ ಕನಕ ಕಲಾ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ. ತಾಲೂಕಿನ ಗ್ರಾ.ಪಂ. ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಸಾರ್ವಜನಿಕರು ಭಾಗವಹಿಸುವರು. ರೈತ ಸಂಘದ ರಾಜ್ಯ ಉಪಾಧ್ಯಕ್ಷರು ಎಂ.ಮಹೇಶ್, ತಾ.ಪಂ. ಸದಸ್ಯರು ಎಂ.ಸೀತಾರಾಂ, ಅಜ್ಜಂಪುರ ಗ್ರಾಪಂ ಸದಸ್ಯರಾದ ಎಸ್.ಶಿವಾನಂದ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ತಿಳಿಸಿದ್ದಾರೆ.



ಜಯಪುರ ಗ್ರಾಮ ಪಂಚಾಯ್ತಿಯಲ್ಲಿ ಭೂಚೇತನ ಕಾರ್ಯಕ್ರಮ


ಜಯಪುರ: ಇಲ್ಲಿನ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರದ ವತಿಯಿಂದ ಭೂಚೇತನ ಕಾರ್ಯಕ್ರಮದ ಕಾರ್ಯಾಗಾರ ನಡೆಯಿತು. ಇಕ್ರಿಸೈಟ್ ಸಂಸ್ಥೆಯ ತಾಂತ್ರಿಕ ಅಧಿಕಾರಿ ಚೇತನ್ ಮಾತನಾಡಿ, ಭೂಚೇತನ ಯೋಜನೆಯ ಉದ್ದೇಶ, ಬೀಜೋಪಚಾರ, ಬೀಜಮೊಳಕೆ ಪ್ರಯೋಗ, ಲಘು ಪೋಷಕಾಂಶ ಬಳಕೆಯಿಂದ ಇಳುವರಿ ಹೆಚ್ಚಳ, ರೈತ ಕ್ಷೇತ್ರ ಪಾಠಶಾಲೆ, ರೈತ ಅನುವುಗಾರರ ಕರ್ತವ್ಯ, ಜವಾಬ್ದಾರಿ, ಭೂಚೇತನ ಯೋಜನೆಯಡಿ ಇಕ್ರಿಸೈಟ್ ಸಂಸ್ಥೆಯ ಪಾತ್ರದ ಬಗ್ಗೆ ಮಾತನಾಡಿದರು. ಸಹಾಯಕ ಕೃಷಿ ಅಧಿಕಾರಿ ಶಿವಮೂರ್ತಿ ಮಾತನಾಡಿ, ರೈತರಿಗೆ ಮಣ್ಣು ಪರೀಕ್ಷೆಯ ಮಹತ್ವ, ರಸಗೊಬ್ಬರಗಳ ಬಳಕೆ, ಪೋಷಕಾಂಶ, ಬತ್ತದ ತಳಿಗಳ ಆಯ್ಕೆ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಪುರುಷೋತ್ತಮ ಮಾತನಾಡಿ, ಕೃಷಿ ಇಲಾಖೆಯ ಯೋಜನೆಗಳನ್ನು ಹಾಗೂ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ವಿಜ್ಞಾನಿ ನಿರಂಜನ್ ಹಾಗೂ ಚಂದ್ರಪಾಟೀಲ್, ಅಡಕೆ ಬೆಳೆ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ಕೃಷಿ ಅಧಿಕಾರಿ ಸವಿತಾ ಎಸ್.ಕಮ್ಮಾರ್ ಮಾತನಾಡಿ,ದರು. ಜಯಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಶ್ರೀನಿವಾಸ್ ಉದ್ಘಾಟಿಸಿದರು. ಉಪಾಧ್ಯಕ್ಷ ಸುಧಾಕರ್, ಸದಸ್ಯ ಡಿ.ಬಿ.ರಾಜೇಂದ್ರ, ಹೇರೂರು ಗ್ರಾಮ ಪಂಚಾಯ್ತಿ ಸದಸ್ಯೆ ವಿನೋದಾ, ಸ್ಥಳೀಯರಾದ ಪ್ರಸನ್ನ, ವಿಜಯೇಂದ್ರ ಹೆಬ್ಬಾರ್, ವಿಘ್ನೇಶ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.