ಮಲೇರಿಯಾ ವಿರೋಧಿ ಮಾಸಾಚರಣೆ
ನರಸಿಂಹರಾಜಪುರ: ಕೀಟ ಜನ್ಯಗಳಿಂದ 10 ಕ್ಕೂ ಹೆಚ್ಚು ಕಾಯಿಲೆಗಳು ಹರಡುತ್ತದೆ ಎಂದು ಆರೋಗ್ಯ ಇಲಾಖೆಯ ಸಂಪನ್ಮೂಲ ವ್ಯಕ್ತಿ ವರ್ಗೀಸ್ ತಿಳಿಸಿದರು. ಪಟ್ಟಣದ 3 ನೇ ಡಿವಿಜನ್ ಅಂಗನವಾಡಿಯಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ನಡೆದ ಕೀಟ ಜನ್ಯ ರೋಗಗಳಿಂದ ಬರುವ ಕಾಯಿಲೆಗಳು ಮತ್ತು ಪರಿಹಾರ ಎಂಬ ವಿಷಯದ ಬಗ್ಗೆ ಮಾತನಾಡಿದರು. ಮಲೇರಿಯಾ, ಡೆಂಗ್ಯೂ, ಮೆದುಳು ಜ್ವರಗಳಂತಹ ಮಾರಣಾಂತಿಕ ಕಾಯಿಲೆ ಬರುತ್ತಿರುವುದು ಕೀಟ ಜನ್ಯಗಳಿಂದಲೇ. ಇಂತಹ ಕೀಟಗಳು ಉತ್ಪತ್ತಿಯಾಗುವುದು ನಮ್ಮ ಮನೆಯ ಸುತ್ತ ನಿಂತ ನೀರಿನಿಂದ, ತೆಂಗಿನ ಚಿಪ್ಪು, ಹಳೆಯ ಟಯರುಗಳಲ್ಲಿ ನಿಂತ ನೀರಿನಿಂದಲೂ ಕೀಟಗಳು ಜನ್ಮ ತಾಳುತ್ತವೆ ಎಂದರು. ಪಟ್ಟಣ ಪಂಚಾಯ್ತಿಯವರು ಪಟ್ಟಣದ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದಾರೆ. ಆರೋಗ್ಯ ಇಲಾಖೆ ಜೊತೆಗೆ ಸಾರ್ವಜನಿಕರು ಕೈಜೋಡಿಸಿದರೆ ಹೆಚ್ಚು ಫಲ ನೀಡುತ್ತದೆ.ಮಹಿಳೆಯರು ತಮ್ಮ ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಪದ್ಮ, ಅನುಸೂಯ, ಸ್ಪೇಲಾ,ಉಷಾ, ಆಶಾ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

