ಅಪಘಾತ: ಮಹಿಳಾ ಟೆಕ್ಕಿ ಸಾವು
ಸಕಲೇಶಪುರ: ಹಿಂಬದಿಯಿಂದ ಟೆಂಪೂ ಟ್ರಾವೆಲ್ಸ್ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಟೆಂಪೊ ಟ್ರಾವೆಲ್ಸ್ನಲ್ಲಿದ್ದ ಮಹಿಳಾ ಟೆಕ್ಕಿ ಸ್ಥಳದಲ್ಲೆ ಮೃತಪಟ್ಟು 10 ಜನ ಮರಣಾಂತಿಕವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಕೆಂಪುಹೊಳೆ ಕಿರುಜಲವಿದ್ಯುತ್ ಯೋಜನೆ ಸಮೀಪ ಶುಕ್ರವಾರ ನಡೆದಿದೆ.
ತಮಿಳುನಾಡು ಮೂಲದ ರಾಧಿ (23) ಮೃತಪಟ್ಟ ಯುವತಿ. ಗಾಯಾಳುಗಳು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ: ಚೆನೈ ಮೂಲದ ಮೆವರಿಕ್ ಸಾಫ್ಟ್ವೇರ್ ಕಂಪನಿಯ ನೌಕರರು ಬೆಂಗಳೂರಿನಿಂದ-ಚಿಕ್ಕಮಗಳೂರಿಗೆ ತೆರಳುತ್ತಿದ್ದ ವೇಳೆ ಬಸ್ಸೊಂದು ತಿರುವು ರಸ್ತೆಯಲ್ಲಿ ವಾಹನ ಹಿಂದಿಕ್ಕುವ ಭರದಲ್ಲಿ ಹಿಂಬದಿಯಿಂದ ಟೆಂಪೂ ಟ್ರಾವೆಲ್ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಟೆಂಪೂ ಟ್ರಾವೆಲ್ ವಾಹನ 20 ಅಡಿ ಆಳದ ಮತ್ತೊಂದು ರಸ್ತೆಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ವಾಹನದಲ್ಲಿದ್ದ ವಿಜಯಂತಿ (24), ಷಣ್ಮುಗಪ್ರಿಯ (23), ಏಲಿಜಬೆತ್ (23), ಬಾಸ್ಮತಿ (25), ಖುರ್ಶಿದ್ (26), ಶ್ರೀಕುಮಾರ್ (30), ಶ್ಯಾಮಸುಂದರ್(24), ಅರುಣ್ ಪ್ರತಾಪ್ (26) ಮತ್ತು ಕಂಪನಿ ವ್ಯವಸ್ಥಾಪಕ ದೇವನಾಥ್ (35) ಗಾಯಗೊಂಡಿದ್ದರೆ, ಪವನ್ ರೆಡ್ಡಿ ಯಾವುದೇ ಗಾಯಗಳಿಲ್ಲದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಗಾಯಾಳುಗಳಿಗೆ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹಾಸನಕ್ಕೆ ಸಾಗಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

