ಚಿಕ್ಕಮಗಳೂರು

ಜ್ವಾಲಾಮಾಲಿನಿ ರಥೋತ್ಸವ

Published On :

ನರಸಿಂಹರಾಜಪುರ: ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಜ್ವಾಲಾಮಾಲಿನಿ ಅಮ್ಮನವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜ್ರಂಭಣೆಯಿಂದ ನೆರವೇರಿತು.
ಬೆಳಗ್ಗೆಯಿಂದಲೇ ಭಕ್ತರು ಜ್ವಾಲಾಮಾಲಿನಿ ಅಮ್ಮನವರ ದರ್ಶನ ಪಡೆದರು. ನಿತ್ಯವಿಧಿ ಸಹಿತ ಮಹಾ ನೈವೇದ್ಯ ಪೂಜೆ ನಡೆಯಿತು. ಜ್ವಾಲಾಮಾಲಿನಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಚಂದ್ರನಾಥ ಬಸದಿಗೆ 108 ಕಲಶಾಭಿಷೇಕ ನಡೆಯಿತು.
ನಂತರ ಜ್ವಾಲಾಮಾಲಿನಿ ಅಮ್ಮನವರ ಸನ್ನಿಧಿಯಲ್ಲಿ ಪ್ರಸಾದ ಬೇಡಿಕೆ, ಬಸ್ತಿಮಠದ ಶ್ರೀಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ರಥಾರೋಹಣ ನಡೆಯಿತು. ಸಂಜೆ ರಾಜಬೀದಿಯಲ್ಲಿ ಮತ್ತೆ ಜ್ವಾಲಾಮಾಲಿನಿ ಅಮ್ಮನವರ ರಥಾರೋಹಣ ನಡೆಯಿತು. ಮೆರವಣಿಗೆಯಲ್ಲಿ ಮಂಗಳ ವಾದ್ಯ, ಡ್ರಂಸೆಟ್, ಕೀಲು ಕುದುರೆ, ಚಂಡೆಯೊಂದಿಗೆ ಭಕ್ತರು ಪಾಲ್ಗೊಂಡಿದ್ದರು.
ಗುರುವಾರ ಅಭಿಷೇಕ:  ಗುರುವಾರ ಶ್ರೀಚಂದ್ರನಾಥಸ್ವಾಮಿಗೆ ಮಹಾಭಿಷೇಕ, ಜ್ವಾಲಾಮಾಲಿನಿ ಅಮ್ಮನವರಿಗೆ 108 ಕಲಶಾಭಿಷೇಕ, ಮಠದ ಬಸ್ತಿಯಲ್ಲಿರುವ ಶ್ರೀಬಾಹುಬಲಿಸ್ವಾಮಿಗೆ ಮಹಾಭಿಷೇಕ, ಮಾತೆ ಜ್ವಾಲಾಮಾಲಿನಿ,
ಶ್ರೀಪದ್ಮಾವತಿ ಅಮ್ಮನವರಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ಅವಭ್ರೃಸ್ಮಾನ, ಪಾದಪೂಜೆ, ಸಂಘ ಪೂಜೆ, ಧ್ವಜಾರೋಹಣ ನೆರವೇರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.