ಚಿಕ್ಕಮಗಳೂರು

ಮೂಲ ಸೌಕರ್ಯಕ್ಕಾಗಿ ಒತ್ತಾಯ

Published On :

ಸೊರಬ: ತಾಲೂಕಿನ ಜಡೆ ಭಾಗದಲ್ಲಿ ರಸ್ತೆ ಸಂಪರ್ಕ ಸೇರಿದಂತೆ ಉತ್ತ ಮ ಆಸ್ಪತ್ರೆ, ರಕ್ಷಣಾ ಇಲಾ ಖೆ, ದೀಪ, ಕುಡಿಯುವ ನೀರಿನ ಅವ್ಯವಸ್ಥೆಗಳ ನಡುವೆ ಇಲ್ಲಿ ಯಾವುದೋ ಒಂದು ಹೊತ್ತಿನಲ್ಲಿ ಬರುವ ಒಂದೆರಡು ಬಸ್ಸು ಕಾಯಲು ಬಸ್ ತಂಗುದಾಣವೇ ಇಲ್ಲ. ಈ ಭಾಗದ ಜನರು ಕುಡಿಯುವ ನೀರು, ದೀಪ, ನೀರಾವರಿ ಸಮಸ್ಯೆಗಳನ್ನು ನಿರಂತರವಾಗಿ ಎದುರಿಸುತ್ತಲೇ ಇದೆ. ಇಲ್ಲಿರುವ ಬಹಳಷ್ಟು ಗ್ರಾಮಗಳಿಗೆ ಸರಿಯಾದ ರಸ್ತೆ ಸಂಪರ್ಕ ಕೂಡ ಇಲ್ಲ. ಸುಸಜ್ಜಿತ ಆಸ್ಪತ್ರೆಯೂ ಇರದ ಇಲ್ಲಿನ ಜನತೆ ಅನಿವಾರ್ಯ ಪಕ್ಕದ ಶಿರಸಿ ತಾಲೂಕನ್ನೆ ನೆಚ್ಚಿಕೊಳ್ಳಬೇಕಾಗಿದೆ. ಹೀಗೆ ಹತ್ತು- ಹಲವು ಸಮಸ್ಯೆಗಳನ್ನು ಕಟ್ಟಿಕೊಂಡು ಬದುಕುತ್ತಿರುವ ಅಲ್ಲಿನ ಜನತೆಗೆ ಅಭಿವೃದ್ಧಿ ಕಾಣುವ ಸೌಭಾಗ್ಯ ಇನ್ನೂ ಕೂಡಿಬಂದಿಲ್ಲ.
ನಿರ್ಮಾಣವಾಗದ ನಿಲ್ದಾಣ: ಶಾಸಕ ಹಾಲಪ್ಪ ಅವಧಿಯಲ್ಲಿ ಇಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು 50 ಲಕ್ಷ ಬಿಡುಗಡೆ ಆಗಿತ್ತು. ಆದರೆ, ಜಾಗದ ತಗಾದೆಯಿಂದಾಗಿ ಬಸ್ ನಿಲ್ದಾಣ ನಿರ್ಮಿಸಲು ಆಗಲಿಲ್ಲ. ಆಗುವ ಲಕ್ಷಣವೂ ಕಾಣಿಸುತ್ತಿಲ್ಲ ಎಂದು ಜಿಪಂ ಸದಸ್ಯೆ ಮಲ್ಲಮ್ಮ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಗೂಡ್ಸ್ ಉರುಳಿ ವ್ಯಕ್ತಿ ಸಾವು
ಶೃಂಗೇರಿ: ತಾಲೂಕಿನ ಧರೆ ಪಂಚಾಯಿತಿ ಹೊಳೆಕೊಪ್ಪ ಬಳಿ ಗೂಡ್ಸ್ ರಿಕ್ಷಾವೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಮೃತ ವ್ಯಕ್ತಿ ಅಶೋಕ್ (30) ಎಂದು ತಿಳಿದು ಬಂದಿದೆ.
ಸಿಮೆಂಟ್ ಶೀಟ್‌ಗಳನ್ನು ತುಂಬಿಸಿಕೊಂಡು ಹೊಳೆಕೊಪ್ಪದತ್ತ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಚಾಲಕ ಅಶೋಕ್ ಸ್ಥಳದಲ್ಲೇ ಮೃತಪಟ್ಟಿದ್ದು, ಪ್ರಕರಣ ದಾಖಲಾಗಿದೆ.
ಚಾನಲ್‌ಗೆ   ಬಡಿದು ಜಿಂಕೆ ಸಾವು
ತರೀಕೆರೆ: ಸಮೀಪದ ಬಾವಿಕೆರೆ ನರ್ಸರಿ ಪ್ಲಾಂಟೇಶನ್ ಬಳಿ ದೊಡ್ಡ ಚಾನಲ್ ತಡೆಗೋಡೆಗೆ ಬಡಿದು ಭದ್ರಾ ಅಭಯಾರಣ್ಯದ ಸುಮಾರು ನಾಲ್ಕೂವರೆ ವರ್ಷದ ಜಿಂಕೆಯೊಂದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಬಾವಿಕೆರೆ ನರ್ಸರಿ ಪ್ಲಾಂಟೇಶನ್ ಪ್ರದೇಶದಿಂದ ಬೆನ್ನಟ್ಟಿದ ನಾಯಿಗಳಿಂದ ತಪ್ಪಿಸಿಕೊಂಡು ಬಂದ ಜಿಂಕೆಯು ದೊಡ್ಡ ಚಾನಲ್ ದಾಟಿ ಹೋಗುವಾಗ ಚಾನಲ್‌ನ ತಡೆಗೋಡೆಗೆ ಜಿಂಕೆಯ ಮುಸುಡಿ ಬಡಿದಿದೆ. ಇದರಿಂದ ತೀವ್ರ ಗಾಯವಾಗಿ ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಜಿಂಕೆಯ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.