ಚಿಕ್ಕಮಗಳೂರು

ಇಂದು, ನಾಳೆ ಕೆಂಡದಾರ್ಚನೆ

Published On :

ತರೀಕೆರೆ: ಅಜ್ಜಂಪುರ ಹೋಬಳಿಯ ಬಗ್ಗವಳ್ಳಿ ಗ್ರಾಮದಲ್ಲಿ  ಶ್ರೀ ವೀರಭದ್ರ ಸ್ವಾಮಿ ಅಗ್ನಿ ಪ್ರತಿಷ್ಠಾಪನೆ ಮತ್ತು ಕೆಂಡದಾರ್ಚನಾ ಮಹೋತ್ಸವ ಸೋಮವಾರ ಹಾಗೂ ಮಂಗಳವಾರ ನಡೆಯಲಿದೆ.
ವಡ್ನಾಳು ಮಠದ ಶ್ರೀ ಅಭಿನವ ದೇವಣ್ಣಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಧ್ವಜಾರೋಹಣ, ಅಗ್ನಿ ಪ್ರತಿಷ್ಠಾಪನೆ ನಡೆಯಲಿದೆ. ಮಂಗಳವಾರ ಮುಂಜಾನೆ ಗ್ರಾಮದ ಮುಖ್ಯ ಬೀದಿಗಳಲ್ಲಿ ವೀರಭದ್ರಸ್ವಾವಿ, ಕಾಳಿಕಾಂಬ ಅಮ್ಮನವರ ಹೂವಿನ ಉತ್ಸವ ನಂತರ ದುಗ್ಗಳ ಸೇವೆಯೊಂದಿಗೆ ಕೆಂಡದಾರ್ಚನೆ ಮಹೋತ್ಸವ ನೆರವೇರುವುದು.


ಅಸಂಘಟಿತ ಕಾರ್ಮಿಕರಿಗೂ ಸೌಲಭ್ಯ ನೀಡಿ


ಚಿಕ್ಕಮಗಳೂರು: ಕಾರ್ಮಿಕರು ತಮ್ಮ ಹಕ್ಕಿನ ಚಲಾವಣೆಯ ಜತೆ ಕರ್ತವ್ಯ ಮರೆಯುತ್ತಿರುವುದು ವಿಷಾದನೀಯ ಎಂದು ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಪದ್ಮಪ್ರಸಾದ್ ಹೇಳಿದ್ದಾರೆ.
ಮೂಗ್ತಿಹಳ್ಳಿಯ ಎನ್‌ಕೆಜಿ ಜಯಂತಿ ಕಾಫಿ ಪ್ರೈ.ಲಿ.ನಲ್ಲಿ ಶನಿವಾರ ನಡೆದ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಆಡಳಿತ ಮತ್ತು ಕಾರ್ಮಿಕರು ಎರಡು ಚಕ್ರಗಳಂತಿದ್ದು, ಎರಡೂ ಚಕ್ರಗಳು ಸಮತೋಲನದಿಂದ ಚಲಿಸಿದಾಗ ಮಾತ್ರ ಸಂಸ್ಥೆಯ ಮತ್ತು ಸಮಾಜದ ಏಳಿಗೆ ಸಾಧ್ಯವೆಂದರು.
ಹಿಂದಿನವರು ಹೋರಾಟ ನಡೆಸಿದ ಯಶಸ್ಸಿನ ಫಲದಿಂದಾಗಿ ಇಂದು ಕಾರ್ಮಿಕ ವಲಯ ಸಂಘಟಿತವಾಗಲು ಸಾಧ್ಯವಾಗಿದೆ. ಕೆಲ ಅಸಂಘಟಿತ ವಲಯ ಸೌಲಭ್ಯದಿಂದ ವಂಚಿತವಾಗುತ್ತಿದ್ದು, ಅದನ್ನು ಸರಿಪಡಿಸುವ ಅಗತ್ಯವಿದೆ ಎಂದರು.
ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಕೆ. ಚಂದ್ರು, ಮೊಹಮದ್ ಖಿಜರುಲ್ಲಾ, ವಕೀಲರ ಸಂಘದ ಕಾರ್ಯದರ್ಶಿ ತೇಜಸ್ವಿ ಇದ್ದರು. ವಕೀಲ ದೇವೇಂದ್ರ ಕುಮಾರ್ ಜೈನ್ ವಿಶೇಷ ಉಪನ್ಯಾಸ ನೀಡಿದರು. ದೇವರಾಜ್ ಸ್ವಾಗತಿಸಿ, ವ್ಯವಸ್ಥಾಪಕ ವಿಶ್ವನಾಥ್ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.