ಚಿಕ್ಕಮಗಳೂರು

ವಾಹನಗಳ ವೇಗ ನಿಯಂತ್ರಿಸಿ

Published On :

ತರೀಕೆರೆ ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹೊರವಲಯದಿಂದ ಆಗಮಿಸುವ ವಿವಿಧ ಬಗೆಯ ವಾಹನಗಳ ವೇಗ ಭರಾಟೆ ಹೇಳತೀರದಾಗಿದೆ. ಪಟ್ಟಣ ಪ್ರವೇಶಿಸುವ ಸರಕು ತುಂಬಿದ ಅಥವಾ ಪ್ರಯಾಣಿಕರನ್ನು ಕರೆತರುವ ವಾಹನಗಳು ಯಾವುದೇ ವೇಗ ನಿಯಂತ್ರಣ ಅಳವಡಿಸಿಕೊಂಡಂತೆ ಕಾಣುವುದಿಲ್ಲ. ಪಟ್ಟಣ ಪ್ರವೇಶಿಸುವ ಮುನ್ನ ಊರಿನ ಸರಹದ್ದಿಗೆ ಮುನ್ನ ವಾಹನಕ್ಕೆ ಯಾವ ವೇಗ ಇರುತ್ತದೆಯೇ ಅದೇ ವೇಗದಲ್ಲಿ ಊರನ್ನು ಪ್ರವೇಶಿಸುತ್ತಾರೆ, ಅದೂ ಕಿವಿಗಡಕಚ್ಚುವಂತೆ ಹಾರ್ನ್ ಮಾಡುತ್ತಾ. ಸಂತೆ ವಲಯ, ಶಾಲಾ ವಲಯ, ಕಿರಿದಾದ ವೃತ್ತಗಳ ವಲಯ ಇವು ಯಾವುದನ್ನು ಗಮನಿಸದೆ ತುಂಬಾ ವೇಗದಲ್ಲಿ ವಾಹನಗಳು ಪಟ್ಟಣದ ಬಿ.ಎಚ್. ರಸ್ತೆಯಲ್ಲಿ ಸಂಚರಿಸುತ್ತವೆ. ಪಾದಚಾರಿಗಳಿಗಳಿಗೆ ರಸ್ತೆಯಲ್ಲಿ ಜೀವವನ್ನು ಕೈಯಲ್ಲಿಡಿದುಕೊಂಡು ಸಂಚರಿಸಬೇಕಿದೆ. ವಾಹನಗಳ ಯದ್ವಾತದ್ವಾ ವೇಗದ ಸಂಚಾರ ಕಿರಿಕಿರಿಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಾದುದರಿಂದ 24 ಗಂಟೆಗಳ ಕಾಲ ವಾಹನಗಳ ಒತ್ತಡ ತುಂಬಾ ಹೆಚ್ಚು ಇರುತ್ತದೆ. ವೇಗವನ್ನೂ ನಿಯಂತ್ರಿಸದೆ ಮನಸೋ ಇಚ್ಚೆ ವಾಹನ ಓಡಿಸುವುದರಿಂದ ಅನೇಕ ಬಾರಿ ಪಟ್ಟಣ ವ್ಯಾಪ್ತಿಯಲ್ಲೇ ಅಪಘಾತಗಳು ಸಂಭವಿಸಿದೆ. ರಸ್ತೆ ನಿಯಮಗಳನ್ನು ಒಂದೂ ವಾಹನಗಳು ಪಾಲಿಸುವುದಿಲ್ಲ. ಕೂಡಲೇ ಸಂಬಂಧಿಸಿದ ಇಲಾಖೆಯವರು ಇತ್ತ ಕಡೆ ಗಮನ ಹರಿಸಿ ಪಟ್ಟಣ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳ ವೇಗವನ್ನು ನಿಯಂತ್ರಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ಟ ವಿನಾಯಕ ತರೀಕೆರೆ



ಬೀದಿದೀಪ ದುರಸ್ತಿ ಮಾಡಿ
ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿರುವ ಟೌನ್ ಕ್ಯಾಂಟೀನ್ ವೃತ್ತದಲ್ಲಿರುವ ಐ- ಮಾಸ್ಕ್ ಲೈಟ್, ಹನುಮಂತಪ್ಪ ವೃತ್ತದಲ್ಲಿರುವ ಟ್ಯೂಬ್ಯೂಲರ್‌ಪೋಲ್ ಹಾಗೂ ಇನ್ನು ಹಲವು ಪ್ರದೇಶಗಳಲ್ಲಿ ಬೀದಿ ದೀಪಗಳಿದ್ದು, ಅವುಗಳು ಸುಮಾರು ದಿನಗಳಿಂದ ದುರಸ್ತಿಯಲ್ಲಿವೆ. ದುರಸ್ತಿಪಡಿಸುವಂತೆ ಹಲವು ಬಾರಿ ನಗರಸಭೆಗೆ ಮನವಿ ಮಾಡಿಕೊಂಡರೂ ಯಾವುದೇ ರೀತಿ ಗಮನಹರಿಸಿಲ್ಲ, ಇದರಿಂದ ಇಲ್ಲಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಕೆಲವು ಬಾರಿ ಬೀದಿದೀಪ ಇಲ್ಲದೆ ಇರುವುದರಿಂದ ಅಪಘಾತಗಳು ಹಾಗೂ ಕಳ್ಳತನ ಪ್ರಕರಣಗಳು ಸಂಭವಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು.
ಟ ಸಾರ್ವಜನಿಕರು, ವಿಜಯಪುರ



ಟ್ರಾಫಿಕ್ ಸಮಸ್ಯೆ ನಿಯಂತ್ರಿಸಿ
ಶೃಂಗೇರಿ ಪಟ್ಟಣದಲ್ಲಿ ಕಳೆದ ಕೆಲ ತಿಂಗಳುಗಳಿಂದ ಪದೇ ಪದೆ ಟ್ರಾಫಿಕ್ ಸಮಸ್ಯೆ ಉದ್ಭವಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.ಪಟ್ಟಣದ ಮುಖ್ಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಜಿಯಾಗಿ ವಾಹನಗಳನ್ನು ನಿಲ್ಲಿಸುವುದು, ಏಕಮುಖ ಸಂಚಾರ ವ್ಯವಸ್ಥೆಯಿದ್ದರೂ ಕೆಲವು ಭಾರಿ ವಾಹನಗಳು ಪಟ್ಟಣದೊಳಗೆ ಸಂಚರಿಸುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಕೆಲವೊಮ್ಮೆ ಗಂಟೆಗಟ್ಟಲೇ ಸಮಸ್ಯೆ ಉಂಟಾಗುತ್ತಿದೆ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕಿದೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕಿದೆ.
ಟ ಗಣೇಶ್, ಶೃಂಗೇರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.