ಭಕ್ತಿ, ಭಾವ, ನಂಬಿಕೆ ಮೌಢ್ಯವಲ್ಲ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 5
ಭಕ್ತಿ, ಭಾವ, ನಂಬಿಕೆ ಮೌಢ್ಯವಲ್ಲ. ವೈಚಾರಿಕ ಹಿನ್ನೆಲೆಯಲ್ಲಿ ದೇವಾಲಯಗಳ ಮೂಲಕ ಬದುಕು ಕಟ್ಟಿಕೊಳ್ಳಬಹುದೆಂದು ಆನಂದಪುರ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಮಹಾಸ್ವಾಮೀಜಿ ಹೇಳಿದ್ದಾರೆ.
ತಾಲೂಕಿನ ಕುನ್ನಾಳು ಗ್ರಾಮದ ಮಹಾಲಿಂಗೇಶ್ವರಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಶಿವಾನುಭವ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಧ್ಯಾನ, ಪೂಜೆ, ಭಜನೆ ಅಷ್ಟೇ ಅಲ್ಲ. ಕಾಯಕ ದಾಸೋಹ ಭಾವವೂ ದೇವಾಲಯದ ಮೂಲಕ ಕಟ್ಟಿಕೊಳ್ಳುತ್ತದೆ. ಸಾಮರಸ್ಯದ ಬದುಕು ಒಗ್ಗಟ್ಟನ್ನು ದೇವಾಲಯ ಕಾಪಾಡುತ್ತದೆ. ತಂದೆ, ತಾಯಿ ಋಣದಂತೆ ಊರಿನ ಋಣ ತೀರಿಸಬೇಕು. ಸರ್ಕಾರವನ್ನೆ ನಂಬಿ ಕುಳಿತರೆ ಸಾಲದು. ಎಲ್ಲರೂ ಸಂಘಟಿತರಾಗಿ ಪ್ರಯತ್ನಿಸಿದರೆ ಗ್ರಾಮದ ಅಭಿವೃದ್ಧಿ ಸಾಧ್ಯ. ಬಡತನದ ಬೇಗೆಯ ಪ್ರತೀಕವಾಗಿದ್ದ ಕುನ್ನಾಳು ಗ್ರಾಮದ ಐದು ದಶಕಗಳ ತಮ್ಮ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ ಶ್ರೀಗಳು, ರಸ್ತೆ, ವಿದ್ಯುತ್, ಬಸ್ ಯಾವುದೂ ಇಲ್ಲದ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಆಡುತ್ತಿದ್ದ ನಾಟಕವೇ ಮನರಂಜನೆ. ರಾಗಿ ಮುದ್ದೆಯೆ ಮೆಚ್ಚು. ಪ್ರೀತಿ, ವಾತ್ಸಲ್ಯ, ನೆಮ್ಮದಿ ಸಾಮರಸ್ಯದ ಬದುಕ್ಕಿತ್ತು. ಇಂದಿನ ಆರ್ಥಿಕ ಸಮೃದ್ಧತೆ ಸಂತಸ ತಂದಿದೆ ಎಂದರು.
ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಲಿಂಗಪೂಜೆ ವ್ಯಕ್ತಿಗತಚೇತನ ಜಾಗೃತಗೊಳಿಸಿದರೆ, ದೇವಾಲಯ ಆರಾಧನೆ ಸಮಷ್ಠಿ ಚೇತನ ಜಾಗೃತಿಗೊಳಿಸುತ್ತದೆ. ಶೈವಧರ್ಮದ ವಿವಿಧ ಮಜಲುಗಳಲ್ಲಿ ಪರಿಷತರೂಪವೆ ವೀರಶೈವ ಧರ್ಮ. ಇಲ್ಲಿ ಭಕ್ತಿ, ಶ್ರದ್ಧೆ ವಿಭಿನ್ನ ಪೂಜಾ ಪದ್ಧತಿ ಇವೆ. ಪರಿಕರ ಪೂಜೆಯೇ ಶಾಸ್ತ್ರ ಆಗಬಾರದು. ಲಿಂಗಪೂಜೆ ಸಹಜ ಪೂಜೆ ಆಗಬೇಕು ಎಂದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇವಾಲಯಗಳು ಸಂಸ್ಕಾರ ನೀಡುವ ತಾಣಗಳು. ಭವ್ಯ ಮಂದಿರ ಜನರ ಧಾರ್ಮಿಕ ಒಲವಿನ ದ್ಯೋತಕ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡಿ, ದೇವಾಲಯಗಳು ಸದ್ಭಾವನೆ ಬಿತ್ತುವ ಕೇಂದ್ರಗಳು. ಭಕ್ತಿ, ಶಕ್ತಿ ಪರಿವರ್ತನೆಯ ತಾಣಗಳು. ಶರಣಾಗತಿಯ ಪ್ರತೀಕ. ದೇವಸ್ಥಾನಕ್ಕೆ ಕೊಂಡೊಯ್ಯುವ ಪದಾರ್ಥಗಳು ದೈವ ಸಾನ್ನಿಧ್ಯದಿಂದ ತೀರ್ಥ, ಪ್ರಸಾದವಾಗಿ ರೂಪುಗೊಳ್ಳುತ್ತದೆ. ನರನೂ ಹರನಾಗಬೇಕೆಂಬುದು ಇದರ ಸಂದೇಶ ಎಂದರು.
ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಉಪಾಧ್ಯಕ್ಷೆ ಅನ್ನಪೂರ್ಣ, ಬೀರೂರಿನ ಲಲಿತಮ್ಮ ಶ್ರೀಕಂಠಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್, ಪಿಸಿಎಆರ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಲ್ಮರುಡಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ನಂಜುಂಡಾರಾಧ್ಯ, ಕಾರ್ಯದರ್ಶಿ ಜಿ. ಹಾಲಪ್ಪ, ಖಜಾಂಚಿ ವೀರೇಗೌಡ, ಪತ್ರಕರ್ತ ಪ್ರಭುಲಿಂಗಶಾಸ್ತ್ರಿ, ನಿವೃತ್ತ ಶಿಕ್ಷಕ ಕೆ.ಎಲ್. ರಾಜಶೇಖರಯ್ಯ ವೇದಿಕೆಯಲ್ಲಿದ್ದರು. ಮಲ್ಲೇಶಪ್ಪ ಸ್ವಾಗತಿಸಿದರು, ಪ್ರೊ. ಬಿ. ಸೋಮಶೇಖರ್ ಪ್ರಸ್ತಾವಿಸಿ, ಡಾ. ಸಚ್ಚಿದಾನಂದಮೂರ್ತಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

