ಅರಿವಿನ ಜ್ಞಾನಕ್ಕೆ ಧರ್ಮ ಅಗತ್ಯ
ಕ.ಪ್ರ.ವಾರ್ತೆ, ತರೀಕೆರೆ, ಮೇ 10 ವಿಜ್ಞಾನವು ಜಗತ್ತಿನ ಅರಿವು ತಿಳಿಸಿದರೆ ಧರ್ಮವು ಅರಿವಿನ ಜ್ಞಾನ ತಿಳಿಸುತ್ತದೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ತಿಳಿಸಿದ್ದಾರೆ.
ಅವರು, ಶನಿವಾರ ನಾಗಭೋವನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಯೋಗದಲ್ಲಿ ನಾಗಭೋವನಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಸಿದ್ದೇಶ್ವರಸ್ವಾಮಿ ನೂತನ ದೇವಾಲಯ ಪ್ರಾರಂಭೋತ್ಸವ ಕರ್ತೃ ಗದ್ದುಗೆ ಪ್ರಾಣಪ್ರತಿಷ್ಠಾಪನೆ, ಶಿಖರ ಕಲಶಾರೋಹಣ ಸಂದರ್ಭದಲ್ಲಿ ನಡೆದ ಸರ್ವ ಶರಣರ ಸಮ್ಮೇಳನ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.
ಭೂಮಿ ಮೇಲೆ ಮಾತ್ರ: ಗಾಳಿಪಟವನ್ನು ಸೂತ್ರಧಾರ ಹೇಗೆ ನಿಯಂತ್ರಿಸುತ್ತಾನೋ ಹಾಗೆ ಅಭಿವೃದ್ಧಿ ಹೊಂದಿರುವ ಮನುಷ್ಯನ ನಿಯಂತ್ರಣಕ್ಕೆ ಧರ್ಮಸೂತ್ರ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಶಿಕಾರಿಪುರ ಸ.ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಡಾ. ಶೈಲಜಾ ಹೊಸಳ್ಳಿಯಾರ್ ಅವರು ವಿಶೇಷ ಉಪನ್ಯಾಸ ನೀಡಿ, ಸಿದ್ಧರ ಪರಂಪರೆಯನ್ನು 300-400 ವರ್ಷಗಳ ಹಿಂದಿನ ಪರಂಪರೆ ಎನ್ನಬಹುದು. ಬಸವಣ್ಣನವರು ಮನಸ್ಸು ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು, ದೇವರ ಹೆಸರಿನಲ್ಲಿ ಕಂದಾಚಾರ ಮೂಢನಂಬಿಕೆ ಸುಲಿಗೆ ಇತ್ಯಾದಿ ಹೋಗಬೇಕು ಎಂದು ತಿಳಿಸಿದರು.
ನಂಬಿಕೆ ಮೇಲೆ ಬದುಕು: ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ ಗ್ರಾಮದ ಐಕ್ಯತೆ ಬಿಂಬಿಸುವ ದೇವಾಲಯ ನಿರ್ಮಿಸಿರುವುದು ಸಂತೋಷದ ವಿಷಯ, ದೇವರು ಕಾಪಾಡುತ್ತಾನೆ ಎನ್ನುವ ನಂಬಿಕೆ ಮೇಲೆ ಬದುಕು ಸಾಗಬೇಕು ಬದುಕಿಗೆ ದೇವರು ಮತ್ತು ಗುರು ಅವಶ್ಯಕ ಎಂದು ತಿಳಿಸಿದರು.
ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ಗ್ರಾಮದ ಹೃದಯದಲ್ಲಿ ದೇವಾಲಯ ನಿರ್ಮಿಸಿ ನಿಮ್ಮ ಮನಸ್ಸು ಅರ್ಪಿಸಿದ್ದೀರಿ, ದೇವರಲ್ಲಿ ಭಕ್ತಿ, ಧರ್ಮದಲ್ಲಿ ನಂಬಿಕೆ ಶ್ರದ್ಧೆಯಿಂದ ಸಮಾಜದ ಒಳಿತಿಗಾಗಿ ಬದುಕಿ ಬಾಳಿದರೆ ಅದರಲ್ಲಿ ಸುಖ ನೆಮ್ಮದಿ ಇದೆ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ಚಂದ್ರಕಲಾ, ಜಿಪಂ ಸದಸ್ಯರಾದ ಕೃಷ್ಣಮೂರ್ತಿ, ಎಸ್.ಬಿ. ಆನಂದಪ್ಪ, ಕೆ.ಆರ್. ಆನಂದಪ್ಪ, ಸಿ.ಎಸ್. ವಿರುಪಾಕ್ಷಪ್ಪ, ಸಾಧು ವೀರಶೈವ ಸಮಾಜದ ಅಧ್ಯಕ್ಷ ಡಿ.ಎನ್. ಶಂಕರಲಿಂಗಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ. ರಾಜಪ್ಪ, ಮುಖಂಡ ದೋರನಾಳು ಪರಮೇಶ್, ಡಿ.ವಿ. ಗಂಗಾಧರಪ್ಪ, ಎಚ್ಎಂ.ಶಿವಮೂರ್ತಿ, ಎಸ್.ಮಲ್ಲಪ್ಪ, ಗೌರಣ್ಣ, ಯಶವಂತಪ್ಪ, ಪುಟ್ಟಪ್ಪ, ರುದ್ರಪ್ಪ, ವೀರಭದ್ರಪ್ಪ, ಸಿದ್ದಬಸಪ್ಪ, ಗ್ರಾಪಂ ಸದಸ್ಯ ಎನ್.ಜಿ. ಶಿವಾನಂದಪ್ಪ, ಅನ್ನಪೂರ್ಣ ಚೆನ್ನಕೇಶವ, ಚಂದ್ರಶೇಖರ್ ಧನಂಜಯ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಚಂದ್ರಶೇಖರ್ ಸ್ವಾಗತಿಸಿದರು. ಧನಂಜಯ ಮುಗುಳಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

