ಮಹಾವೀರರ ಮಾರ್ಗ ಅನುಸರಿಸಿ
ಕ.ಪ್ರ.ವಾರ್ತೆ, ಕಡೂರು, ಮೇ 18
ಪಟ್ಟಣಕ್ಕೆ ಆಗಮಿಸಿದ ಅಣುವ್ರತ ರಥಯಾತ್ರೆಯನ್ನು ಮಲೆನಾಡು ವಲಯ ತೇರಾಪಂಥ್ ಸಮಿತಿ ಅಧ್ಯಕ್ಷ ಭವರ್ಲಾಲ್ ನೆಹರ್ ಅವರ ನೇತೃತ್ವದಲ್ಲಿ ಕಡೂರು ಜೈನ ಸಮುದಾಯ ತೇರಾಫಂಥದ ಅನುಯಾಯಿಗಳು ಸ್ವಾಗತಿಸಿದರು.
ಪಟ್ಟಣದ ಜೈನ ದೇವಾಲಯದ ಬಳಿ ಯಾತ್ರೆ ಸ್ವಾಗತಿಸಿ ಮಲೆನಾಡು ವಲಯ ಮುಖ್ಯಸ್ಥ ಭವರ್ಲಾಲ್ ಮಾತನಾಡಿ, ಆಚಾರ್ಯ ತುಳಸಿ ಅವರು ಮಾನವ ಕಲ್ಯಾಣಕ್ಕಾಗಿ ಹಲವು ಆಚಾರ ಸಂಹಿತೆ ರೂಪಿಸಿದ್ದರು. ಭಗವಾನ್ ಮಹಾವೀರರು ಹಿಂಸಾ ಮಾರ್ಗವು ವ್ಯಕ್ತಿ ಮತ್ತು ಸಮಾಜ ಎರಡಕ್ಕೂ ಹಾನಿಕರ ಎಂಬ ವಾಣಿಯನ್ನು ಅನುಸರಿಸಿದರು. ಜಗತ್ತಿನಲ್ಲಿ ಅಹಿಂಸೆ ಪಸರಿಸುವ ಮಹೋನ್ನತ ಕಾರ್ಯಕ್ರಮದಲ್ಲಿ ತೊಡಗಿದ್ದರು. ಧಾರ್ಮಿಕ ಸಹಿಷ್ಣುತೆ, ದುಶ್ಚಟಗಳಿಂದ ದೂರ ಇರುವುದು, ಪರಿಸರ ನಾಶ ಮಾಡದಂತೆ ಜಾಗೃತಿ ಮೂಡಿಸುವುದು ಮುಂತಾದ ಸಮಾಜಕ್ಕೆ ಹಿತಕಾರಿ ಮಾರ್ಗ ಪಾಲಿಸಿ ಮಾದರಿ ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸಲುವಾಗಿ ಈ ವ್ರತ ಅನುಸರಿಸೋಣ ಎಂದು ಕರೆ ನೀಡಿದರು.
ಮೆರವಣಿಗೆಗೆ ಕಿರಣ್ಜಿ, ರಶ್ಮಿಜಿ ಮತ್ತು ಗೌತಮ್ಜಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ತೇರಾಪಂಥ್ ಸದಸ್ಯರು ಹಲವಾರು ಭಿತ್ತಿಪತ್ರ ಹಿಡಿದು ದುಶ್ಚಟಗಳ ವಿರುದ್ಧ ಘೋಷಣೆ ಕೂಗಿದರು. ಸಮತಾ ಭವನದಲ್ಲಿ ಸಭೆ ಆಯೋಜಿಸಲಾಗಿತ್ತು. ಆಗಸ್ಟ್ 8ರಂದು ದೆಹಲಿಯಲ್ಲಿ ಯಾತ್ರೆಯ ಸಮಾರೋಪ ನಡೆಯಲಿದೆ ಎಂದು ಪ್ರಕಟಿಸಲಾಯಿತು.
ಅಶೋಕ್ಕುಮಾರ್, ಶುಕ್ಲೇಚಾ, ಮಹಾವೀರ ಸುರಾನ, ಶಿವರತನ್ ಸಂಚೇತಿ, ಕಮಲ್ಚಂದ್ ಡಾಗಾ, ಅಮೃತ್ಲಾಲ್ ಮೆಹತಾ, ಪೊಪ್ಪಟ್ಲಾಲ್, ಮುರಳಿ ಕೊಠಾರಿ ಸೇರಿದಂತೆ ನೂರಾರು ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

