ಕಸಾಪ 100ರ ಸಂಭ್ರಮ 27ಕ್ಕೆ
ಕೊಪ್ಪ: ಕನ್ನಡ ಸಾಹಿತ್ಯ ಪರಿಷತ್ತಿನ ನೂರರ ಸಂಭ್ರಮದ ವರ್ಷಾಚರಣೆಯನ್ನು ಮೇ 27ರಂದು ಹಿರೇಕೊಡಿಗೆಯ ಕುವೆಂಪು ಸಂದೇಶ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಸಾಪದ ಅಧ್ಯಕ್ಷ ಗುಡ್ಡೇತೋಟ ನಟರಾಜ್ ತಿಳಿಸಿದರು.
ಪುರಭವನದಲ್ಲಿ ತಾಲೂಕು ಕಸಾಪ ಹಾಗೂ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಸಾಪ ಘಟಕ್ಕೆ ನೂರು ವರ್ಷ ತುಂಬುತ್ತಿದೆ ಎಂದು ಹೇಳಿದರು.
ಮೂರೂ ಹೋಬಳಿಗಳಲ್ಲಿ ಉಪನ್ಯಾಸ, ಪ್ರಾಥಮಿಕ ಶಾಲಾ ಮಕ್ಕಳಿಗೆ ಕವಿಪರಿಚಯದೊಂದಿಗೆ ಭಾವಗೀತೆಗಳನ್ನು ಕಲಿಸುವ ಗೀತ ಸಂಭ್ರಮ, ಸಾಹಿತ್ಯಾಸಕ್ತರ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಸೇರಿದಂತೆ ವಿವಿಧ ಕನ್ನಡ ಸಾಹಿತ್ಯ ಪರವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರವಾಗಿ ಹಲವು ವರ್ಷಗಳಿಂದ ದುಡಿಯುತ್ತಿರುವ ನುಡಿ ಚಿತ್ರ ಸಂಗ್ರಹಕಾರರಾದ ಶಂ.ನ. ಶೇಷಗಿರಿಯವರು ಸಂಕೇತಿಕಾವಾಗಿ ಉದ್ಘಾಟನೆ ಮಾಡುವರು. ಮುಖ್ಯ ಅಥಿತಿಯಾಗಿ 7ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೆ.ಜಿ.ಎನ್. ಶಾಸ್ತ್ರೀ, ತಾಲೂಕು ಕಸಾಪದ ಪೂರ್ವ ಅಧ್ಯಕ್ಷರಾದ ಡಾ. ಅಲಿಗೆ ವಿವೇಕಾನಂದ, ಎಚ್.ಎಂ. ಸುಬ್ಬಣ್ಣ, ಎಚ್.ಎಸ್. ಕಳಸಪ್ಪ.ಹೋಬಳಿ ಅಧ್ಯಕ್ಷರಾದದ ಎ.ಈ.ಅಶೋಕ್, ಎ.ಓ. ವೆಂಕಟೇಶ್, ಎಚ್.ವಿ. ಶಿವಾನಂದರಾವ್ ಪಾಲ್ಗೊಲಿದ್ದಾರೆ ಎಂದರು.
ನಮ್ಮನ್ನಗಲಿದ ಅಪ್ರತಿಮ ಸಾಹಿತ್ಯ ಸಂಘಟಕ ದಿ. ಹು. ಶ್ರೀವತ್ಸ ಅವರ ನೆನಪಿನಲ್ಲಿ ಸಾಹಿತ್ಯಿಕ ಚಟುವಟಿಕೆಗಳ ಆಯೋಜನೆಗೆ ನೆರವಾಗುವಂತೆ ತಾಲೂಕು ಕಸಾಪ ಮೇಲುಸ್ತುವಾರಿಯಲ್ಲಿ ಕನಿಷ್ಠ 1 ಲಕ್ಷಗಳ ದತ್ತಿನಿಧಿಯನ್ನು ಸ್ಥಾಪಿಸಲು ಉದ್ದೇಶಿಲಾಗಿದೆ. ಈ ದತ್ತಿನಿಧಿಗೆ ಸಾಹಿತ್ಯಾಭಿಮಾನಿಗಳು ದೇಣಿಗೆ ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
7ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಜಿ.ಎಸ್. ಮಹಬಾಲ್ ರಾವ್ ಮಾತನಾಡಿ, ಸಮ್ಮೇಳನವು ಸಾಹಿತ್ಯ ಆಸಕ್ತರ ಮತ್ತು ದಾನಿಗಳಿಂದ ಯಶಸ್ವಿಯಾಗಿ ನೇರವೇರಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತ್ಯ ಪರಿಷತ್ತಿನ ಪ್ರಮುಖರಾದ ಗೋಪಾಲಕೃಷ್ಣ, ಎಚ್.ಎಂ. ರವಿಕಾಂತ್, ರಾಘವೇಂದ್ರ ಭಟ್, ಎ.ಒ. ವೆಂಕಟೇಶ್, ರಮೇಶ್, ಲೆಕ್ಕಪರಿಶೋಧಕ ಶ್ರೀ ಹರ್ಷ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

