ಪೆರ್ನೆ ದುರಂತ: ಸಹಾಯಹಸ್ತ
ಉಪ್ಪಿನಂಗಡಿ : ಪೆರ್ನೆಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ಟ್ಯಾಂಕರ್ ಅನಿಲ ಸೋರಿಕೆ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ಕುಟುಂಬದ ನಿರ್ಗತಿಕ ಸದಸ್ಯರಿಗೆ, ಮನೆ ಮಠ ಕಳೆದುಕೊಂಡು ನಿರ್ಗತಿಕರಾದವರಿಗೆ ಸಹಾಯಹಸ್ತ ನೀಡುವ ಕುರಿತು ಕರೆಯಲಾದ ಸಭೆಯಲ್ಲಿ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ತೋಯಾಜಾಕ್ಷ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 8 ಮಂದಿಯನ್ನು ಬಲಿ ತೆಗೆದುಕೊಂಡ ದುರ್ಘಟನೆಗೆ ಶೋಕ ವ್ಯಕ್ತಪಡಿಸಲಾಯಿತು. ದುರ್ಘಟನೆಯಲ್ಲಿ ಬಂಧುಗಳನ್ನು ಕಳೆದುಕೊಂಡವರಿಗೆ, ಮನೆ ಮಠ ಕಳೆದುಕೊಂಡು ನಿರ್ಗತಿಕರಾದವರಿಗೆ ನಾಗರಿಕ ಸಮಾಜ ಸಹಕಾರ ನೀಡಿ, ಅವರಿಗೆ ಸಹಜ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಅಭಿಪ್ರಾಯಿಸಲಾಯಿತು. ಪೆರ್ನೆಯ ಶ್ರೀ ರಾಮಚಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ರಾಮದಾಸ ರೈ, ಮಿತ್ರದಾಸ್ ರೈ ಪಂಚಾಯತ್ ಸದಸ್ಯರಾದ ನವೀನ್ ಕುಮಾರ್, ಜಾರಪ್ಪ ಗೌಡ, ಕುಸುಮಾ, ಜಯಲಕ್ಷ್ಮಿ, ಜಯಂತ, ಭಾರತಿ, ಲಕ್ಷ್ಮೀ, ಮಾಜಿ ಜಿ.ಪಂ. ಸದಸ್ಯ ಕೃಷ್ಣ ನಾಯ್ಕ, ಮುಂದಾಳುಗಳಾದ ನಿಹಾ ಅಬೂಬಕ್ಕರ್, ಸುಂದರ್, ಅಬ್ದುಲ್ ರಜಾಕ್, 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಸ್ಕರ್ ಅಲಿ ಮೊದಲಾದವರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಸ್ಥಳೀಯರು ಸಂತ್ರಸ್ತರ ಬದುಕು ರೂಪಿಸಲು ತಮ್ಮ ಕೈಲಾದ ಧನ ಸಹಾಯವನ್ನು ಘೋಷಿಸಿದರು. ಈ ಕಾರ್ಯಕ್ಕೆ ಮಂಗಳೂರಿನ ಸೆಂಟ್ರಲ್ ಮುಸ್ಲಿಂ ಬೋರ್ಡ್ ಕಮಿಟಿಯ ವತಿಯಿಂದ ರು. 25 ಸಾವಿರವನ್ನು ನೀಡಲಾಗಿತ್ತು. ಸುಮಾರು 2 ಲಕ್ಷಕ್ಕೆ ನಿಕಟವಾಗಿ ಸಂಗ್ರಹವಾದ ಮೊತ್ತವನ್ನು ಸಂತ್ರಸ್ತರ ಪುನರ್ ವಸತಿಗಾಗಿ ವಿನಿಯೋಗಿಸುವುದಾಗಿ ಪಂಚಾಯತ್ ಅಧ್ಯಕ್ಷರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

