ಪ್ರಶಾಂತ್ ಹಂತಕರ ಸೆರೆ
ಮಂಗಳೂರು: ಬಿಜೈ ರಾಜ ಹತ್ಯೆಗೆ ಪ್ರತೀಕಾರವಾಗಿ ಪ್ರಶಾಂತ್ ಯಾನೆ ಪಚ್ಚುವನ್ನು ಕೊಲೆಗೈದ ಆಕಾಶಭವನ ಶರಣ್ ಗ್ಯಾಂಗ್ ನಾಲ್ವರು ಸಹಚರರನ್ನು ಸಿಸಿಬಿ ಮತ್ತು ದಕ್ಷಿಣ ಎಸಿಪಿ ತಂಡ ಬಂಧಿಸಿದೆ.
4 ಕೊಲೆ ಪ್ರಕರಣಗಳ ಆರೋಪಿ ಜೆಪ್ಪಿನಮೊಗರು, ತಂದೊಳಿಗೆ ಕೋಟ್ಯಪ್ಪಗುಡ್ಡೆ ನಿವಾಸಿ ಶೇಖರ ಪೂಜಾರಿ ಮಗ ಭವಾನಿ ಶಂಕರ್ ಯಾನೆ ಮನೋಜ್ ಯಾನೆ ಭವಾನಿ (32), ಕಾಸರಗೋಡು ಬೇಕೂರಿನ ಭವಿಷ್ ಯಾನೆ ಮುನ್ನ (24), ಕಲ್ಲಡ್ಕ ಗೋಳ್ತಮಜಲು ಹೊಸೈಮಾರ್ ಮನೆ ಪೂವಪ್ಪ ಪೂಜಾರಿ ಪುತ್ರ ಪ್ರವೀಣ್ ಕೆ.ಪಿ. (32), ಕಾವೂರು ಆಕಾಶ ಭವನದ ಹರಿಶ್ಚಂದ್ರ ಶೆಟ್ಟಿಯ ಪುತ್ರ ನವೀನ್ ಶೆಟ್ಟಿ ಯಾನೆ ಪಿಲಿ ನವೀನ (32) ಬಂಧಿತರು.
ವೆಲೆನ್ಸಿಯದಲ್ಲಿರುವ ಮಂಗಳಾ ಬಾರ್ ಎದುರು ಕುಂಜತ್ತಬೈಲ್ನ ಪ್ರಶಾಂತ್ನನ್ನು ಗುಂಡು ಹಾರಿಸಿ, ತಲವಾರ್ಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆರೋಪಿಗಳು ಸಂಚಾರಕ್ಕೆ ಬಳಸುತ್ತಿದ್ದ ಕ್ವಾಲಿಸ್ ವಾಹನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕೊಲೆಯಾದ ಪ್ರಶಾಂತ್ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಆದರೆ ಈತ ಬಿಜೈ ರಾಜ ಹತ್ಯೆಗೈದವರ ಜತೆ ತಿರುಗಾಡುತ್ತಿದ್ದ ಇದೇ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಮನೀಶ್ ಕರ್ಬಿಕರ್ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಹೇಳಿದರು. ಕೊಲೆಯಲ್ಲಿ ಇನ್ನು ಕೆಲವರ ಪಾತ್ರ ಇದ್ದು ಅವರನ್ನು ಶೀಘ್ರ ಬಂಧಿಸಲಾಗುವುದು ಎಂದರು.
ಕೇರಳ ಮಂಜೇಶ್ವರದಿಂದ ಕ್ವಾಲಿಸ್ನಲ್ಲಿ ಮಂಗಳೂರಿನತ್ತ ಬರುತ್ತಿದ್ದ ವೇಳೆ ತಲಪಾಡಿಯಲ್ಲಿ ಬಂಧಿಸಲಾಯಿತು.
ಎಸಿಪಿ ಜಗನ್ನಾಥ್ ಮತ್ತು ಸಿಸಿಬಿ ಇನ್ಸ್ಪೆಕ್ಟರ್ ಜಂಟಿ ಕಾರ್ಯಾಚರಣೆ ನಡೆಸಿದ್ದರು.
ಕೈ ಕಡಿದುಕೊಂಡ!: ಪ್ರಶಾಂತ್ ಮೇಲೆ ಯದ್ವಾತದ್ವಾ ತಲವಾರ್ ಬೀಸುತ್ತಿದ್ದ ವೇಳೆ ಭವಾನಿ ಶಂಕರ್ ಕೈಗೆ ಗಂಭೀರ ಗಾಯವಾಗಿದೆ. ಪ್ರಶಾಂತ್ ಇದ್ದ ಕಾರಿನ ಮೇಲೆ ತಲವಾರ್ ಬೀಸಿದಾಗ ಜಾರಿ ಈತನ ಕೈಗೆ ಬಿದ್ದಿದೆ. ಆದರೆ ಕೊಲೆ ಮಾಡಿದ ಬಳಿಕವೇ ತನ್ನ ಕೈಯಿಂದ ತನ್ನದೇ ರಕ್ತ ಬರುತ್ತಿರುವುದು ಗೊತ್ತಾಯಿತು.
ಶರಣ್ ಎಸ್ಕೇಪ್: ಬಿಜೈ ರಾಜನ ಗೆಳೆಯ ದುಬೈ ವಿಕ್ಕಿ ಶೆಟ್ಟಿ ಆಕಾಶ ಭವನ ಶರಣ್ಗೆ ಸುಪಾರಿ ನೀಡಿದ್ದ. ರಾಜ ಹಂತಕರು ಮಡಿಕೇರಿ ಜೈಲ್ನಲ್ಲಿದ್ದರೆ, ಪ್ರಶಾಂತ್ ಕೇವಲ ಪೊಲೀಸ್ ವಿಚಾರಣೆಯಲ್ಲಿ ಹೇಳಿಕೆ ನೀಡಿ ಬಚಾವ್ ಆಗಿದ್ದ. ಆದರೆ ಭೂಗತ ಜಗತ್ತಿನಿಂದ ಬಚಾವ್ ಆಗಲು ಸಾಧ್ಯವಾಗಿಲ್ಲ. ಆಕಾಶಭವನ ಶರಣ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

