ನಾಳೆ 90 ಕಲಾವಿದರ ನೃತ್ಯಯಜ್ಞ
ಮಂಗಳೂರು: ರಜತೋತ್ಸವ ಸಂಭ್ರಮದಲ್ಲಿರುವ ಕದ್ರಿ ನೃತ್ಯಭಾರತಿ ವರ್ಷಪೂರ್ತಿ ಸರಣಿ ಕಾರ್ಯಕ್ರಮ ಸಮಾರೋಪ ಅಂಗವಾಗಿ 16ರಂದು ಪುರಭವನದಲ್ಲಿ 90 ಕಲಾವಿದರಿಂದ 'ನೃತ್ಯಯಜ್ಞ' ಕಾರ್ಯಕ್ರಮ ನಡೆಯಲಿದೆ.
ಸಂಜೆ 4.30ರಿಂದ 9 ಗಂಟೆ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಲಾವಣ್ಯ ಅನಂತ್ ಭರತನಾಟ್ಯ ಪ್ರದರ್ಶಿಸುವರು ಎಂದು ಗೀತಾ ಸರಳಾಯ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೃತ್ಯಭಾರತಿ ಗುರುದ್ವಯರಾದ ರಶ್ಮಿಚಿದಾನಂದ್ ಹಾಗೂ ಗೀತಾ ಸರಳಾಯ ನಿರ್ದೇಶನದಲ್ಲಿ ಸಂಜೆ 4.30ರಿಂದ ಸಂಜೆ 6.30ರವರೆಗೆ ನೃತ್ಯಭಾರತಿ ವಿದ್ಯಾರ್ಥಿಗಳಿಂದ ನೃತ್ಯಯಜ್ಞ ನಡೆಯಲಿದೆ. ಉಳ್ಳಾಲ ಮೋಹನ ಕುಮಾರ್ ಉದ್ಘಾಟಿಸುವರು. ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಕಾರ್ಯದರ್ಶಿ ಎಚ್.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸುವರು. ಬಿ.ಎನ್.ಗೋಪಾಲಕೃಷ್ಣ ರಾವ್ ದಂಪತಿಗೆ ವಿಶೇಷ ಸನ್ಮಾನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ರತ್ನಾಕರ ಜೈನ್, ಸುಧಾಕರ ರಾವ್ ಪೇಜಾವರ, ಕೆ.ವಿ.ರಮಣ್, ರಶ್ಮಿ ಚಿದಾನಂದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

