ದಕ್ಷಿಣ ಕನ್ನಡ

ಮೈಲಿ ಹೇಳಿಕೆಗೆ ಆಕ್ರೋಶ

Published On :

ಮಂಗಳೂರು: ಉಪ್ಪಿನಂಗಡಿ ಪೆರ್ನೆ ಟ್ಯಾಂಕರ್ ಅಪಘಾತ ಹಾಗೂ ಅಗ್ನಿ ದುರಂತದ ಸಂತ್ರಸ್ತರಿಗೆ ಪರಿಹಾರ ಪುನರ್ವಸತಿ ಕಲ್ಪಿಸುವ ಹೊಣೆಗಾರಿಕೆ ಎಚ್‌ಪಿಸಿಎಲ್ ಮತ್ತು ತೈಲ ಕಂಪನಿಗಳದ್ದು ಅಲ್ಲವೆಂದು ಹೇಳಿರುವ ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೈಲಿ ಹೇಳಿಕೆಯನ್ನು ಡಿವೈಎಫ್‌ಐ ಜಿಲ್ಲಾ ಸಮಿತಿ ವಿರೋಧಿಸಿದೆ.
ತೈಲ ಉತ್ಪನ್ನಗಳ ಸ್ಪೋಟಕ ಇಂಧನಗಳನ್ನು ಸುರಕ್ಷಿತವಾಗಿ ಸಾಗಿಸುವ ಹೊಣೆ ಉತ್ಪಾದಕ ತೈಲ ಕಂಪನಿಗಳಿಗೆ ಸೇರಿರುತ್ತದೆ. ಎಚ್‌ಪಿಸಿಎಲ್, ಎಂಆರ್‌ಪಿಎಲ್ ಸಾರ್ವಜನಿಕ ಕಂಪನಿಗಳು ಉತ್ಪಾದನೆಯ ನಂತರ ಖಾಸಗಿ ಕಂಪನಿಗಳ ರೀತಿ ಲಾಭ  ದೃಷ್ಟಿಯಲ್ಲಿಟ್ಟುಕೊಂಡು ಅನಿಲ ಸಾಗಾಟವನ್ನು ಖಾಸಗಿ ಸಾಗಾಟದಾರರಿಗೆ ಯಾವುದೇ ನಿಯಮವಿಲ್ಲದೆ ನೀಡಿರುವುದೇ ದುರಂತಕ್ಕೆ ಕಾರಣ.  ತೈಲ ಕಂಪನಿಯ ತಪ್ಪನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
 ದುರಂತದ ಸಂತ್ರಸ್ತರಿಗೆ ತೈಲ ಕಂಪನಿಗಳಿಂದ ಸೂಕ್ತ ಪರಿಹಾರ ಒದಗಿಸುವುದು ವೀರಪ್ಪ ಮೈಲಿ ಅವರ ಜವಾಬ್ದಾರಿ. ಇಲ್ಲವಾದಲ್ಲಿ ಚುನಾವಣೆ ನಂತರ ಪ್ರತಿಭಟನೆ ನಡೆಸಲಾಗುವುದು ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.